ಮೂಲ ಸೌಕರ್ಯವಿಲ್ಲದ ಮೋಗಲಾಕ್ಕೆ ಮಂಕು
ಚಿತ್ತಾಪುರ: ತಾಲೂಕಿನ ಮೋಗಲಾ ಗ್ರಾಮವು ತಾಲೂಕು ಕೇಂದ್ರದಿಂದ ಕೇವಲ 6 ಕಿಮೀ ದೂರದಲ್ಲಿದ್ದು 3 ಸಾವಿರ ಜನಸಂಖ್ಯೆ ಹೊಂದಿದ್ದರೂ ಹಲವು ಮೂಲ ಸೌಲಭ್ಯಗಳಿಂದ ತೊಂದರೆ ಅನುಭವಿಸುತ್ತಿದೆ. ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ವೀರ ಕನ್ನಡಿಗರ ಸೇನೆ ತಾಲೂಕಾಧ್ಯಕ್ಷ ಲಕ್ಷ್ಮಣ ತಾಂಡೂರಕರ ಅರೋಪಿಸಿದ್ದಾರೆ. ಮೋಗಲಾ ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ನಿತ್ಯ ಚಿತ್ತಾಪುರಕ್ಕೆ ಬರಲು ಬಸ್ಸಿನ ಸೌಲಭ್ಯ ಇಲ್ಲ. ಬೆಳಗ್ಗೆ ಮತ್ತು ಸಂಜೆ ಮಾತ್ರ ಬರುತ್ತಿದ್ದು, ಅದು ಬರದಿದ್ದರೆ ಅಂದು ಮಕ್ಕಳು ಶಾಲೆಗೆ ಹೋಗಲು ತುಂಬಾ ತೊಂದರೆಪಡುವರು. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಹಿಳೆಯವರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಅದಷ್ಟು ಬೇಗನೇ ಮಹಿಳೆಯರ ಶೌಚಾಲಯ ನಿರ್ಮಿಸಬೇಕು. ಈ ಬೇಡಿಕೆ ಈಡೇರಿಸಲು ವಿಳಂಬ ನೀತಿ ಅನುಸರಿಸಿದಲ್ಲಿ ಮುಂದಿನ ದಿನಗಳಲ್ಲಿ ಸೇನೆಯು ಉಗ್ರ ಹೋರಾಟ ನಡೆಸಲಿಗೆ ಎಂದು ಅಧ್ಯಕ್ಷ ಲಕ್ಷ್ಮಣ ತಾಂಡೂರಕರ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಘಟಕ ಅಧ್ಯಕ್ಷ ನರಸಿಂಹ ಗುತ್ತೇದಾರ, ಅನೀಲ ಲಕ್ಕನೋರ, ಲಕ್ಷ್ಮಣ ಪೂಜಾರಿ ಇದ್ದರು.
ಬಿಜೆಪಿ ಪದಾಧಿಕಾರಿಗಳ ಆಯ್ಕೆ
ಜೇವರ್ಗಿ: ತಾಲೂಕು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ನೂತನ ಪದಾಧಿಕಾರಿಗಳ ವಿವರ ಇಂತಿದೆ. ಅರುಣಕುಮಾರ ಅಂಗಡಿ, ಗೌಡಪ್ಪಗೌಡ ಅಂಬರಖೇಡ್, ಬಾಪುಗೌಡ ಅರಳಗುಂಡಗಿ, ಅಪ್ಪುಗೌಡ ಮಾಲಿಪಾಟೀಲ್- ಉಪಾಧ್ಯಕ್ಷರು, ವೆಂಕಣ್ಣಗೌಡ ರಾಂಪೂರ, ಮಲ್ಲು ಕಲ್ಯಾಣಿ ನೆಲೋಗಿ, ನಾಮದೇವ ರಾಠೋಡ ಮಂದೇವಾಲ್, ಮಲ್ಲು ಸಜ್ಜನ ಕೂಡಿ- ಕಾರ್ಯದರ್ಶಿ, ಮಲ್ಲು ನಾರಾಯಣಪುರ- ಸಹ ಕಾರ್ಯದರ್ಶಿ, ಪ್ರಕಾಶ ಪಾಟೀಲ್ ದ್ಯಾಮಾ- ಖಜಾಂಚಿ, ಶರಣಯ್ಯ ಹಿರೇಮಠ, ಭೀಮರಾಯ ನೆಲೋಗಿ, ಈರಣ್ಣ ಇಟಗಾ, ಭಾಗಣ್ಣಗೌಡ ಹನ್ನೂರ, ಸಂತೋಷ ಹೊಸಮನಿ, ರಮೇಶ ಸುಗೂರ, ಭೀಮರಾಯ ಹಂಗರಗಾ, ವೆಂಕಟೇಶ ಬಿರಾಳ, ಮಹಾರಾಜ ಪಾಟೀಲ್, ಮಾಳಪ್ಪ ಪೂಜಾರಿ, ಶಿವಣ್ಣಗೌಡ ಮಾರಡಗಿ ಅವರನ್ನು ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಸಂತೋಷ ಮಲ್ಲಾಬಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.