ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶುಲ್ಕ ವಿನಾಯತಿ: ಆದೇಶ ಹಿಂದಕ್ಕೆ

Vishwanath S
Updated On : 22 Feb 2014, 11:11 am

ಗುರುಮಠಕಲ್: ಬಿಸಿಎಂ ಕಾಲೇಜು ವಿದ್ಯಾಥರ್‌ಗಳು ಮುಷ್ಕರ ನಡೆಸಿದರೆ, ಆಧಾರ ಕಾರ್ಡ್ ನೀಡದಿದ್ದರೆ, ಶುಲ್ಕ ವಿನಾಯತಿ ನೀಡದಿರುವ ಬಗ್ಗೆ ಸರ್ಕಾರದ ನೀಡಿದ ಅದೇಶ ಹಿಂದಕ್ಕೆ ಪಡೆಯುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ವಿಧಾನ ಸಭೆಯಲ್ಲಿ ತಿಳಿಸುತ್ತಿದ್ದಂತೆ ವಿದ್ಯಾರ್ಥಿಗಳು ಹರ್ಷ ವ್ಯಕ್ತ ಪಡಿಸಿದರು.
ಸರ್ಕಾರವು 5.10.2013ರ ಪ್ರಕಾರ ಹೊರಡಿಸಿರುವ ಅದೇಶದ ಪ್ರಕಾರ ವಿದ್ಯಾರ್ಥಿಗಳು ಶುಲ್ಕ ವಿನಾಯತಿ ಪಡೆಯುವುದು ಕಷ್ಟಕರವಾಗಿ ಬಡ ವಿದ್ಯಾರ್ಥಿಗಳು ವಿನಾಯತಿಗಾಗಿ ಪರದಾಡುವಂತೆ ಆಗಿದಕ್ಕೆ ರಾಜ್ಯದಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಹಾಗೂ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದು ಸರ್ಕಾರ ನೀಡಿದ ಅದೇಶವನ್ನು ಹಿಂದಕ್ಕೆ ಪಡೆಯುವುದಾಗಿ ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವರು ವಿಧಾನಸಭೆಯಲ್ಲಿ ತಿಳಿಸಿದ್ದಕ್ಕೆ ಶುಲ್ಕ ವಿನಾಯತಿಯ ಗೊಂದಲಕ್ಕೆ ತೆರೆ ಬಿದ್ದು, ವಿದ್ಯಾರ್ಥಿಗಳು ಗೊಂದಲದಿಂದ ಪಾರು ಆಗುವಂತೆ ಆಗಿದೆ.
ಷರತ್ತುಗಳು ಇಲ್ಲ: ಸರ್ಕಾರ ತಾವು ನೀಡಿದ ಅದೇಶವನ್ನು ಹಿಂದಕ್ಕೆ ಪಡೆದಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಷರತ್ತುಗಳು ಇದೀಗ ಅನ್ವಯವಾಗುವುದಿಲ್ಲ. ಯಾವುದೇ ಮುಷ್ಕರಗಳಲ್ಲಿ ಭಾಗಿಯಾಗಿರಬಾರದು, ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗಿರಬೇಕು. ನಿಗದಿಪಡಿಸಿರುವಷ್ಟು ಶೇಕಡ ಅಂಕಗಳು ಹಾಗೂ ಹಾಜರಾತಿ, ಆಧಾರ್ ಕಾರ್ಡ್ ಕಡ್ಡಾಯ ಎನ್ನುವ ವಿಷಯವನ್ನು ಸಹ ಕೈ ಬಿಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement