ಕೊಡೇಕಲ್ಲ- ಬೆಂಗಳೂರು ಬಸ್ ಆರಂಭ
ಹುಣಸಗಿ: ಸುರಪುರ ಘಟಕದ ವಾಯುವ್ಯ ಸಾರಿಗೆ ಸಂಸ್ಥೆಯು ಕೊಡೇಕಲ್ಲದಿಂದ ಬೆಂಗಳೂರಿಗೆ ನೂತನ ಮಾರ್ಗ ಪ್ರಾರಂಭಿಸಿದ್ದು ಕೊಡೇಕಲ್ಲ ಗ್ರಾಮದಲ್ಲಿ ನಾಗರಿಕರು ಬಸ್ಗೆ ಪೂಜೆ ಸಲ್ಲಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ರಂಗನಾಥ ದೊರೆ, ಬಹುದಿನಗಳ ಬೇಡಿಕೆಯಾದ ಕೊಡೇಕಲ್ಲದಿಂದ ಬೆಂಗಳೂರಿಗೆ ಹೊರಡುವ ಬಸ್ ಸಂಚಾರವು ಇಂದಿನಿಂದ ಪ್ರಾರಂಭವಾಗುತ್ತಿರುವುದು ನಮ್ಮ ಭಾಗದ ಪ್ರತಿಯೊಬ್ಬರಿಗೂ ಸಂತಸ ಎಂದರು. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಗ್ರಾಮೀಣ ಪ್ರದೇಶವಾದ ಕೊಡೇಕಲ್ಲದಿಂದ ರಾಜಧಾನಿಗೆ ಪ್ರಯಾಣಿಸಲು ಅನುಕೂಲ ಕಲಿಸಿದ್ದಕ್ಕೆ ಅಧಿಕಾರಿಗಳಿಗೆ ಅಭಿನಂದಿಸಿದರು.
ಕೊಡೇಕಲ್ಲದಿಂದ ಪ್ರತಿದಿನ ಸಂಜೆ 5.30ಕ್ಕೆ ಹೊರಡುವ ಕೊಡೇಕಲ್ಲ ಬೆಂಗಳೂರ ನೂತನ ಬಸ್ ನಾರಾಯಣಪುರ, ಲಿಂಗಸ್ಗೂರು, ಬಳ್ಳಾರಿ, ತುಮಕೂರ ಮೂಲಕ ಮುಂಜಾನೆ 6.30ಕ್ಕೆ ಬೆಂಗಳೂರು ತಲುಪುವುದು ಎಂದು ಹುಣಸಗಿ ಸಂಚಾರಿ ನಿರೀಕ್ಷಕ ಕಲ್ಲಣ್ಣ ಪ್ಯಾಟಿ ತಿಳಿಸಿದ್ದಾರೆ. ಮೊದಲ ದಿನವೇ ಆದಾಯ ಚನ್ನಾಗಿ ಬಂದಿದೆ ಎಂದರು. ಪ್ರಯಾಣಿಕರು ಈ ಬಸ್ ಸೌಲಭ್ಯ ಪಡೆಯಲು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಡೆಕಲ್ಲ ಕರವೇ ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜಾನಾಯಕ ಅಂಬಲಿಹಾಳ, ಹನಮಂತ್ರಾಯ ಉಪ್ಪಲದಿನ್ನಿ, ಪ್ರಶಾಂತನಾಯಕ ರಾಠೋಡ, ಸಿದ್ರಾಮ ತುಂಬಗಿ, ಬಸವಂತಪ್ಪ ಪಡಶೆಟ್ಟಿ, ಈಶ್ವರಪ್ಪ ಹೂಗಾರ, ಶರಣಬಸಪ್ಪ ಮ್ಯಾಗೇರಿ, ಪರಶುರಾಮ ಮಡಿವಾಳರ, ಚಾಲಕ ತಿರುಪತಿ ರಾಯನಪಾಳೆ, ನಿರ್ವಾಹಕ ಪರಶುರಾಮ ಮಾಲಿಪಾಟೀಲ್, ರಮೇಶ ಹೂಗಾರ, ಸಂಗಣ್ಣ ಧನ್ನೂರ, ಶಶಿಕಾಂತ ಸುಣ್ಣದಳ್ಳಿ, ಬಸವರಾಜ ಜೈನಾಪುರ, ಸಂಗು ಕಕ್ಕೇರಿ ಮತ್ತಿತರಿದ್ದರು.