ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕ್ರೀಡಾಕೂಟಗಳಿಂದ ಏಕತಾ ಪ್ರಜ್ಞೆ ಜಾಗೃತಿ

Vishwanath S
Updated On : 24 Feb 2014, 11:27 am

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಫೆ.23
ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ನಿಮಿತ್ತ ನಗರದ ಸೈಯದ್ ಅಕ್ಬರ್ ಹುಸೇನಿ, ಕೆಬಿಎನ್ ಪಿಯು ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಯೂನಿಟಿ ಕಪ್ ಕ್ರಿಕೆಟ್ ಪಂದ್ಯಾವಳಿ ವಿನ್ನರ್ ತಂಡ ನಂದೂರ(ಬಿ)ಗೆ 11 ಸಾವಿರ ಮತ್ತು ರನ್ನರ್ ಕಲ್ಲಹಂಗರಗಾ ತಂಡಕ್ಕೆ 5 ಸಾವಿರ ಮತ್ತು ಇನ್ನಿತರೆ ವಿಜೇತ ತಂಡಗಳಿಗೆ ಬಹುಮಾನ ಮತ್ತು ಟ್ರೋಫಿಯನ್ನು ಮಾಜಿ ಸಿಎಂ ಯಡಿಯೂರಪ್ಪ ವಿತರಿಸಿದರು.
ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ಪರಶುರಾಮ ನಸಲವಾಯಿ ನೇತೃತ್ವದಲ್ಲಿ ನಗರದ ಸೈಯದ್ ಅಕ್ಬರ್ ಹುಸೇನಿ, ಕೆಬಿಎನ್ ಪಿಯು ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯಾವಳಿ ವಿಜೇತ ತಂಡಗಳಿಗೆ ನಗರದ ಎನ್‌ವಿ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ನಾನು ಅಲ್ಲ, ನಾವು..: ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪನವರು, ಯುವಕರ ಜೀವನದಲ್ಲಿ ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಾಗುತ್ತದೆ. ಆಧುನಿಕ ಕ್ರಿಕೆಟ್ ಕೂಟಗಳು ಜನರಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ರೀತಿಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದೊಂದಿಗೆ 'ನಾನು ಅಲ್ಲ, ನಾವು' ಎಂಬ ಏಕತೆಯ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗುತ್ತವೆ ಎಂದು ಕಿವಿಮಾತು ಹೇಳಿದರು.
ನಂದೂರ(ಬಿ) ತಂಡವು ಜಿಲ್ಲಾ ಮಟ್ಟದಲ್ಲಿ ಗೆಲ್ಲುವುದರೊಂದಿಗೆ ಫೆಬ್ರವರಿ ಕೊನೆಯ ವಾರದಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಬಿಜೆಪಿ ಯುವ ಮೋರ್ಚಾ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದೆ. ಅಲ್ಲಿ ವಿಜೇತ ತಂಡವು ರಾಜ್ಯಮಟ್ಟದ ಬಿಜೆಪಿ ಯುವ ಮೋರ್ಚಾ ಕ್ರಿಕೆಟ್ ಪಂದ್ಯ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಆಡಲಿದೆ. ಅಲ್ಲಿ ವಿಜೇತ ತಂಡವು ಅರುಣಾಚಲಪ್ರದೇಶದ ಧರ್ಮಶಾಲಾ ಅಂತಾರಾಷ್ಟ್ರೀಯ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ಕ್ರಿಕೆಟ್ ಪಂದ್ಯದ ಫೈನಲ್‌ನಲ್ಲಿ ಭಾಗವಹಿಸಲಿದೆ
ಪಂದ್ಯಾವಳಿ ಉದ್ದೇಶ: 'ನರೇಂದ್ರ ಕೋ ನಮನ್‌' ಎಂಬ ವಾಕ್ಯದಡಿ 'ಖೇಲೇಗಾ ಯುವ ಜೀತೆಗಾ ಭಾರತ್‌' ಎಂಬ ಘೋಷಣೆಯೊಂದಿಗೆ ಜಿಲ್ಲೆಯ ಕ್ರೀಡಾಸಕ್ತರು ಹಾಗೂ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಯೂನಿಟಿ ಕಪ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ, ರಾಜಕುಮಾರ ಪಾಟೀಲ ತೇಲ್ಕೂರ, ಮುದ ದೇಶಪಾಂಡೆ, ವಿದ್ಯಾಸಾಗರ ಶಾಬಾದಿ, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣಿ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಶಶೀಲ ನಮೋಶಿ, ಅಮರನಾಥ ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ವಾಲ್ಮಿಕಿ ನಾಯಕ, ಶರಣಪ್ಪ ತಳವಾರ, ಬಿ.ಜಿ. ಪಾಟೀಲ, ವಿದ್ಯಾಸಾಗರ ಕುಲ್ಕರ್ಣಿ, ಶೆಶಿಕಲಾ ಟೆಂಗಳಿ, ಪರಶುರಾಮ ನಸಲವಾಯಿ, ಶಲೇಶ ಗುಣಾರಿ, ಸೂರ್ಯಕಾಂತ ಡೋಣಿ, ಬಸವರಾಜ ಮದ್ರಿಕಿ, ರಮಾನಂದ, ಸುನೀಲ್, ಶಿವಲಿಂಗ ಪಟ್ಟಣ್ಣ, ಕಿರಣ ಅಷ್ಟಗಿಕರ್, ಮಂಜುನಾಥ, ಮಹೇಶ ಸಾರಡಾ, ಶಿವರಾಜ ಸೂಲಹಳ್ಳಿ, ನಾಗರಾಜ್, ರಾಜಶೇಖರ, ಗುರುರಾಜ, ವಿಜಯಕುಮಾರ, ಕೊರೆ, ತಮ್ಮಣ್ಣ ಡಿಗ್ಗಿ,  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement