ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸತತ ಅಭ್ಯಾಸದಿಂದ ಸಾಧನೆ

Vishwanath S
Updated On : 25 Feb 2014, 11:25 am

ಶಹಾಪೂರ: ಸತತ ಅಧ್ಯಯನದಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನಾದರೂ ವಿಶೇಷ ಸಾಧನೆಗೈಯಲು ಸಾಧ್ಯ ಎಂದು ಪ್ರಾಚಾರ್ಯ ಶಶಿಕಾಂತ ಚಾಮನಾಳ ಹೇಳಿದರು.
ಶಹಾಪೂರ ತಾಲ್ಲೂಕಿನ ಸಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಈ ರೀತಿ ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕ ಪಂಪಾಪತಿ ಶಿಣರ್ ಅವರು, ಇಂದಿನದು ಸ್ಪರ್ಧಾತ್ಮಕಯುಗ. ಸ್ಪರ್ಧೆಗೆ ತಕ್ಕಂತೆ ತಯಾರಾಗುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮತ್ತೊಬ್ಬ ಮುಖ್ಯ ಅತಿಥಿ ಮಹಾಂತಗೌಡ ಸುಬೇದಾರ ಮಾತನಾಡಿ, ನಮ್ಮ ಸಗರ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಆದರೂ, ಕೂಡ ಕಾಲೇಜಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಗಾಗಿ ತಾವೂ ಹಗಲಿರುಳು ಶ್ರಮಿಸುವುದಾಗಿ ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಹಾಗೂ ಸಂಶೋಧಕ ಡಾ.ಎಂ.ಎಸ್. ಸಿರವಾಳ ಸಾಂಸ್ಕೃತಿಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ನಿಜವಾದ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದರು.
ಪ್ರಭಾರಿ ಪ್ರಾಚಾರ್ಯ ವೈ.ಹೆಚ್. ವಜ್ಜಲ್ ಅಧ್ಯಕ್ಷತೆ  ವಹಿಸಿದ್ದರು.
ಪ್ರಶಸ್ತಿ ವಿತರಣೆ: ಇದೇ ಸಂದರ್ಭದಲ್ಲಿ 2012-13ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ್ದ ವಿದ್ಯಾರ್ಥಿನಿಯರಿಗೆ ದಿ. ಸಾಯಬಣ್ಣ ಎಂ. ಚಪಾಟ್ಲಿ ಸಿರವಾಳ, ದಿ. ಮಲಕಣ್ಣಗೌಡ ಸುಬೇದಾರ ಸಗರ, ದಿ. ಮಹಾಂತಪ್ಪ ವಮ್ಮಾ ಸಗರ, ದಿ. ಗಂಗಾರಾಮ ನಾಯಕ ದೋರನಹಳ್ಳಿ, ದಿ. ಸಕ್ರೆಪ್ಪಗೌಡ ದೇಸಾಯಿ ಸ್ಮರಣಾರ್ಥ ನೀಡಲಾಗುವ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಕು. ಸುವರ್ಣ ಸಂಗಣ್ಣ ಬಂಟನೂರ, ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಕು. ಶೃತಿ ಮಲ್ಲಣ್ಣ ವಮ್ಮಾ ಹಾಗೂ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಕು.ಶಂಶಾದ ಬೇಗಂ ಅಬ್ದುಲ್ ವತ್ತಾರ ಅವರಿಗೆ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement