ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಟಿಯು ಅಧಿಕಾರಿ ವಜಾಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Vishwanath S
Updated On : 26 Feb 2014, 11:32 am

ಗುಲ್ಬರ್ಗ: ಭಷ್ಟಾಚಾರದಲ್ಲಿ ತೊಡಗಿರುವ ಆರೋಪ ಹೊತ್ತಿರುವ ವಿಟಿಯು ಪ್ರಾದೇಶಿಕ ಸ್ನಾತಕೋತ್ತರ ಕೇಂದ್ರದ ಅಧಿಕಾರಿ ಡಾ. ಪ್ರವೀಣ ಹೊನಗುಂಟಿಕರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಅಖಿಲ ಬಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಡಾ. ಪ್ರವೀಣ ಹೊನಗುಂಟಿಕರ್ ಅವರು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ಮತ್ತು ಪ್ರಾಜೆಕ್ಟ್ ಕೆಲಸಕ್ಕಾಗಿ ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿದ್ದು ಮತ್ತು ವಿಟಿಯುನ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲೂ ಅವ್ಯವಹಾರ ನಡೆದಿದ್ದು, ಇದ್ದನ್ನು ಸಿಓಡಿ ತನಿಖೆ ವಹಿಸಿಬೇಕು ಎಂದು ನಗರ ಕಾರ್ಯದರ್ಶಿ ಅರುಣ ಪಾಟೀಲ ಆಗ್ರಹಿಸಿದ್ದಾರೆ.
ಕ್ರಮ ಕೈಗೊಂಡಿಲ್ಲ: ಈಗಾಗಲೇ ವಿದ್ಯಾರ್ಥಿ ಸಂಘಟನೆಯ ದೂರನ್ನಾಧರಿಸಿ ವಿಟಿಯು ಕೇಂದ್ರ ಸಂಸ್ಥೆಯಿಂದ ತಂಡ ಬಂದು ತನಿಖೆ ನಡೆಸಿದೆ. ತನಿಖಾ ವರದಿಯನ್ನು ಸಲ್ಲಿಸಲಾಗಿದ್ದರೂ, ಅವರ ವಿರುದ್ಧ ಇನ್ನೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಎಬಿವಿಪಿ ವಿದ್ಯಾರ್ಥಿಗಳು ಪ್ರಶ್ನಿಸಿದರು. ಹೊನಗುಂಟಿಕರ್ ವಿರುದ್ಧ ತನಿಖಾ ಸಮಿತಿ ತನ್ನ ವರದಿ ನೀಡಿದರೂ ಸಹ ವಿಟಿಯು ಕ್ರಮ ಕೈಗೊಳುತ್ತಿಲ್ಲ. ಆದಷ್ಟು ಬೇಗ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ. ವಿದ್ಯಾನಂದ ಕಾಂಬಳೆ, ಅನಂದ ಕಪನೂರ, ಅಂಬೂಜಿ, ದೇವೇಂದ್ರ ಮತ್ತಿತರರು ಪತ್ರಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement