ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸದಾಶಿವಗಡ- ಅವರಾದ ಹೆದ್ದಾರಿ ಕಾಮಗಾರಿಗೆ ಶಾಸಕ ಬಿಆರ್ಪಿ ಚಾಲನೆ

Mainashree
Updated On : 28 Feb 2014, 12:50 pm

ಆಳಂದ: ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿದ್ದಕ್ಕಾಗಿ ವಿಧಾನಸಭೆ ಚುನಾವಣೆಯಲ್ಲಿ ಜನ ವಿರೋಧಿಗಳಿಗೆ ಪಾಠ ಕಲಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಹೇಗೆ ಅಭಿವೃದ್ಧಿ ಮಾಡಬೇಕು. ಇಲ್ಲದ್ದಿದ್ದಾಗ ಬೀದಿಗಿಳಿದು ಹೀಗೆ ಜನರ ಕೆಲಸ ಮಾಡಿಸಬೇಕೆಂಬುದೂ ಗೊತ್ತಿದೆ ಎಂದರು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ಸಿದ್ದಾರ್ಥ ಚೌಕ್‌ನಿಂದ ಸದಾಶಿವಗಡ- ಅವರಾದ ಹೆದ್ದಾರಿ ಕಾಮಗಾರಿಗೆ ಇತ್ತೀಚೆಗೆ ಅಡಿಗಲ್ಲು ನೆರವೇರಿಸಿ ಮಾತನಾಡಿ, ವಾಗ್ದಾರಿ- ರಿಬ್ಬನ್‌ಪಲ್ಲಿ ಗುಲ್ಬರ್ಗ ಮಾರ್ಗದ ಹೆದ್ದಾರಿ ನಿರ್ಮಾಣಕ್ಕೆ ಪ್ರಯತ್ನಿಸಿದ ಫಲವಾಗಿ ರಸ್ತೆ ನಿರ್ಮಾಣವಾಯಿತು. ಅದನ್ನು ನಾವೇ ಮಾಡಿಸಿದ್ದೇವೆಂದು ಫೋಟೋ ಹಾಕಿಸಿಕೊಂಡು ಪ್ರಚಾರ ಗಿಟ್ಟಿಸಿ ಜನರಿಗೆ ಮರಳು ಮಾಡಲು ಯತ್ನಿಸಿದ್ದರಾದರೂ ಜನ ಮರಳಾಗದೆ ಪಾಠ ಕಲಿಸಿದ್ದಾರೆ ಎಂದರು.
ಗುಣಮಟ್ಟದ ರಸ್ತೆ ನಿರ್ಮಿಸಿ: ಗುಣಮಟ್ಟದ ಉತ್ತಮ ರಸ್ತೆ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಹಿಂದೆ ರಸ್ತೆ ಮಾಡುವ ಮೊದಲೇ ಕಿತ್ತುಹೋಗಿದೆ. ಮತ್ತೆ ಹಾಗಾಗದಂತೆ ನೋಡಿಕೊಳ್ಳಬೇಕು. ಖಜೂರಿ ಬಾರ್ಡ್‌ರ್‌ನಿಂದ ಆಳಂದವರೆಗಿನ ರಸ್ತೆಯನ್ನು ವಿಸ್ತರಿಸಲಾಗುತ್ತಿದೆ. ನೀರು, ಚರಂಡಿ ಸೌಲಭ್ಯಕ್ಕಾಗಿ ಪಟ್ಟಣದಲ್ಲಿ 30 ಕೋಟಿ ಹಾಗೂ 50 ಕೋಟಿ ವೆಚ್ಚದಲ್ಲಿ ಒಳಚರಂಡಿ ಹಾಗೂ ನೀರು ಶುದ್ಧೀಕರಣ ಕೆಲಸದ ಕ್ರಿಯಾಯೋಜನೆ ರೂಪಿಸಲಾಗಿದೆ. 95 ಲಕ್ಷ ವೆಚ್ಚದಲ್ಲಿ ಹಜರತ್ ಲಾಡ್ಲೆ ಮಷಾಕ್ ದರ್ಗಾ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದು ತಿಳಿಸಿದರು.
ಯಾದಗಿರಿ ಪಿಡಬ್ಲ್ಯೂಡಿ ಅಧಿಕಾರಿ ಸುಭಾಷ ನಾಯಕ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಮಾಜಿ ಸದಸ್ಯ ಗುರುನಾಥ ಷಣ್ಮೂಖ, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ, ಸಭೆ ಅಧ್ಯಕ್ಷತೆ ವಹಿಸಿದ್ದ ಅಹ್ಮದ್ ಅಲಿ ಚುಲಬುಲ್ ಇದ್ದರು. ಡಾ. ಎಸ್.ಎ. ಕೊಗನೂರೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement