ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅನಧಿಕೃತ ಕಸಾಯಿಖಾನೆ ವಿರುದ್ಧ ಕ್ರಮಕ್ಕೆ ಆಗ್ರಹ

Lingaraj Badiger
Updated On : 1 Mar 2014, 11:16 am

ಗುಲ್ಬರ್ಗ: ರಾಜ್ಯ ಸರ್ಕಾರದ ಅನುಮತಿ ಹಾಗೂ ಗುಲ್ಬರ್ಗ ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆಯದೆ ಕಸಾಯಿಖಾನೆಗಳನ್ನು ನಡೆಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೈದ್ರಾಬಾದ್ ಕರ್ನಾಟಕ ಪರಿಸರ ಜಾಗೃತಿ ಮತ್ತು ಸುರಕ್ಷಾ ಸಂಸ್ಥೆ ಆಗ್ರಹಿಸಿದೆ. ನಗರದ ರಾಮಜಿ ನಗರ, ರೋಜಾ, ಮಿಜಗುರಿ, ಮೋಮಿನಪುರ, ಬಡಾವಣೆಗಳಲ್ಲಿ ಕಸಾಯಿಖಾನೆಗಳನ್ನು ಸ್ವೆಚ್ಛೆಯಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರ ಅನುಮತಿ ಇಲ್ಲದೆ ನಡೆಸಲಾಗುತ್ತಿದೆ. ಜಾನುವಾರುಗಳನ್ನು ಕೊಲ್ಲಲು ಪಶುವೈದ್ಯರ ಪ್ರಮಾಣೀಕರಣ ಅವಶ್ಯ. ಆದರೆ ಯಾರೊಬ್ಬ ಕಸಾಯಿಖಾನೆ ನಡೆಸುವವನು ಈ ತರಹದ ಅರ್ಹತಾ ಪ್ರಮಾಣ ಪತ್ರ ಪಡೆದಿಲ್ಲ. ಇಂತಹ ಕಸಾಯಿಖಾನೆಗಳ ವಿರುದ್ಧ ತಕ್ಷಣ ಕ್ರಮ ಜರುಗಿಸಿ ಪರಿಸರ ಮಾಲಿನ್ಯ ತಡೆಗಟ್ಟುಬೇಕೆಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಹೈ-ಕ ಪರಿಸರ ಜಾಗೃತಿ ಮತ್ತು ಸುರಕ್ಷಾ ಸಂಸ್ಥೆ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement