ಅವಳಿ ಜಿಲ್ಲೆಯಲ್ಲಿ ವಿವಿಧೆಡೆ ಶಿವಾನುಭವ ಚಿಂತನೆ
ಗುಲ್ಬರ್ಗ: ಯಾದಗಿರಿ ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನಲ್ಲಿ ಮಾ.1ರಂದು ವಿಶ್ವರಾದ್ಯಮಠದಲ್ಲಿ ಸಾಯಂಕಾಲ 8.30ಕ್ಕೆ 343ನೇ ಶಿವಾನುಭವ ಚಿಂತನೆ ಹಮ್ಮಿಕೊಳ್ಳಲಾಗಿದೆ ಎಂದು ನಗರ ಘಟಕದ ವಿಶ್ವರಾಧ್ಯ ಸೇವಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗೆ ತಿಳಿಸಿದ್ದಾರೆ.
ಶಾಖಾಪುರದಲ್ಲಿ..: ಜೇವರ್ಗಿ ತಾಲೂಕಿನ ಸುಕ್ಷೇತ್ರ ಶಾಖಾಪುರದಲ್ಲಿ ವಿಶ್ವರಾಧ್ಯ ತಪೋವನ ಮಠದಲ್ಲಿ 233ನೇ ಶಿವಾನುಭವ ಚಿಂತನೆಯು ಮಾ.1ರಂದು ಸಂಜೆ 8 ಗಂಟೆಗೆ ನಡೆಯಲಿದೆ.
ಶ್ರೀನಿವಾಸ ಸರಡಗಿಯಲ್ಲಿ..: ಗುಲ್ಬರ್ಗ ತಾಲೂಕಿನ ಸುಕ್ಷೇತ್ರ ಶ್ರೀನಿವಾಸ ಸರಡಗಿಯಲ್ಲಿ 180ನೇ ಶಿವಾನುಭವ ಕಾರ್ಯಕ್ರಮವು ಚಿಕ್ಕ ವೀರೇಶ್ವರ ಹಿರೇಮಠದಲ್ಲಿ ಸಂಜೆ 8 ಗಂಟೆಗೆ ಜರುಗುವುದು.
ಅಪ್ಪನ ಶಾಖಾಪೂರದಲ್ಲಿ..: ಶಹಾಪುರ ತಾಲೂಕಿನ ಅಪ್ಪನ ಶಾಖಾಪುರದ ಭೀ.ಗುಡಿಯಿಂದ 1 ಕಿ.ಮೀ. ದೂರದಲ್ಲಿರುವ ಅಪ್ಪನ ಶಾಖಾಪುರ ಮಠದಲ್ಲಿ ಮಾ.6ರಂದು 8.50ಕ್ಕೆ ಶಿವಾನುಭವಗೋಷ್ಠಿ ಚಿಂತನೆ ಜರುಗಲಿದೆ.