ಪ್ರಾಚೀನ ದೇವಾಲಯ ಜೀಣೋದ್ಧಾರಕ್ಕೆ ಆಗ್ರಹ
ಹಿರೇವಡಗೇರಾ: ಕಲ್ಯಾಣರ ಚಾಲುಕ್ಯರ ಕಾಲದಲ್ಲಿ ಕಟ್ಟಿರುವ ಕೋಡಾಲ ಗ್ರಾಮದಲ್ಲಿರುವ ಶಂಕರಲಿಂಗ ಹಾಗೂ ರಾಮಲಿಂಗ ದೇವಸ್ಥಾನಗಳು ಇಂದು ಜೀರ್ಣೋದ್ಧಾರಕ್ಕಾಗಿ ಕಾದಿವೆ. ಅತ್ಯಂತ ತ್ವರಿತವಾಗಿ ಅವುಗಳ ಜೀರ್ಣೋದ್ಧಾರ ಮಾಡಬೇಕೆಂದು ಕರವೇ ಹೋಬಳಿ ಘಟಕದ ಸಂಘನಾ ಕಾರ್ಯದರ್ಶಿ ಭೀಮು ಕೋಡಾಲ ಆಗ್ರಹಿಸಿದ್ದಾರೆ.
ಗ್ರಾಮದಲ್ಲಿರುವ ಈ ಎರಡು ದೇವಾಲಯಗಳು ಅಕ್ಕಪಕ್ಕದಲ್ಲಿದ್ದು, ಈ ಹಿಂದೆ ಇಲ್ಲಿ ಮದುವೆ ಇನ್ನಿತರ ಮಂಗಳ ಕಾರ್ಯಗಳು ನಡೆಯುತ್ತಿದ್ದವು. ಇಂದು ಇವು ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ.
ಕಟ್ಟಿರುವ ದೇವಾಲಯದ ಗೋಡೆಗಳು ಬಿದ್ದು ಹೋಗಿವೆ.
ಇದರಿಂದಾಗಿ ಅವು ಪಾಳುದೇಗುಲಗಳಾಗಿ ಗೋಚರಿಸುತ್ತಿವೆ.
ಆದ ಕಾರಣ ಜಿಲ್ಲಾಡಳಿತವು ತಕ್ಷಣ ಇಂತಹ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
--
ದೋರನಹಳ್ಳಿ ಕಲಾವಿದರಿಂದ ನಾಟಕ
ಶಹಾಪುರ:ತಾಲೂಕಿನ ದೋರನಹಳ್ಳಿಯ ಸುಕ್ಷೇತ್ರ ಗುರು ಮಹಾಂತೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಸ್ಥಳೀಯ ಕಲಾಭಿಮಾನಿಗಳು ಮತ್ತು ಊರ ಹಿರಿಯರ ಅಭಿಲಾಷೆಯ ಮೇರೆಗೆ ಸ್ಥಳೀಯ ಯುವ ಕಲಾವಿದರು ಜಾತ್ರೆಯಲ್ಲಿನ ಭವ್ಯರಂಗ ಸಜ್ಜಿಕೆಯಲ್ಲಿ 'ಮನೆಯ ಮಾನ, ಅಣ್ಣನ ಪ್ರಾಣ' ಎಂಬ ಸಾಮಾಜಿಕ ನಾಟಕವನ್ನು ಅಭಿನಯಿಸಲಿದ್ದಾರೆ.
ಸ್ಥಳೀಯ ಪ್ರಮುಖರಾದ ಶಂಕರಣ್ಣ ಶಾಣ್ಯನೋರ, ಭೀಮಾಶಂಕರ ಅಣಬಿ, ಬಸವರಾಜ ಆಂದೇಲಿ, ಸಿದ್ದುಫಸ್ಫೂಲ, ಹೈಯಾಳಪ್ಪ ಗುಂಟ್ನೂರ ನೇತೃತ್ವದಲ್ಲಿ ನಾಟಕ ನಡೆಯಲಿದೆ. ್ದ ಗ್ರಾಮದ ನಿಂಗಣ್ಣ ಕಲಶಟ್ಟಿ, ಭಗವಂತ್ರಾಯ ಮಲಗೊಂಡ ನಿರ್ದೇಶನದಲ್ಲಿ ನಾಟಕ ನಡೆಯಲಿದೆ.