ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವೈಭವದ ಗ್ರಾಮ ದೇವತೆ ಜಾತ್ರೆ

Lingaraj Badiger
Updated On : 1 Mar 2014, 11:20 am

ಹುಣಸಗಿ: ಇಲ್ಲಿನ ಗ್ರಾಮ ದೇವತೆ ಜಾತ್ರೆಯು ಸಂಪ್ರದಾಯದಂತೆ ಅತ್ಯಂತ ಸಂಭ್ರಮ ಮತ್ತು ವೈಭವದೊಂದಿಗೆ ನಡೆಯಿತು.
ಸಕಲ ವಾದ್ಯಗಳು ಮತ್ತು ಸಾವಿರಾರು ಜನರ ಜಯಘೋಷ, ಕೇಕೆಯೊಂದಿಗೆ ಆರಂಭವಾದ ರಥಾರೂಢ ದೇವಿಯ ಗಂಗಸ್ಥಳ ಮೆರವಣಿಗೆಯು ಊರಿನ ಹಿರೇಹಳ್ಳದಿಂದ ಒಳ ಅಗಸಿಯ ಸದರ ಕಟ್ಟೆಯವರೆಗೂ ಸಂತಸ ಸಡಗರದಿಂದ ನಡೆಯಿತು.  ಸದರ ಕಟ್ಟೆ  ಮೇಲೆ ದೇವಿಯು ವಿರಾಜಮಾನಳಾದ ನಂತರ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಶೇಷ ಪೂಜೆ, ಉಡಿ ತುಂಬುವುದು, ಮಂಗಳಾರತಿ, ಸಲ್ಲಿಸಲಾಯಿತು.್ತ ಹರಕೆ ಹೊತ್ತ ಭಕ್ತರಿಂದ ದೀಡ್ ನಮಸ್ಕಾರ ಹಾಕಲಾಯಿತು. ಎಲ್ಲ ಕೋಮಿನ ಜನರು ಶ್ರದ್ಧೆ, ಭಕ್ತಿಯಿಂದ ದೇವಿಯ ದರ್ಶನ ಪಡೆದು, ಕಾಯಿ, ಹೂ, ನೈವೇದ್ಯ ಸಮರ್ಪಿಸುತ್ತಿದ್ದು ವಿಶೇಷವಾಗಿತ್ತು. ಮೂರು ವರ್ಷಗಳಿಗೊಮ್ಮೆ ಜರುಗುವ ಗ್ರಾಮ ದೇವತೆ  ಜಾತ್ರೆ   ನಡೆದು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ವಿಶೇಷ: ಬಹುತೇಕ ಎಲ್ಲ ಗ್ರಾಮಗಳಲ್ಲಿ ಒಂದು ಅಗಸಿ, ಒಂದೇ ದ್ಯಾಮವ್ವನ ಗುಡಿ ಇದ್ದರೆ ಹುಣಸಗಿಯಲ್ಲಿ ಮಾತ್ರ ಒಳ ಅಗಸಿ ಮತ್ತು ಹೊರ ಅಗಸಿ ಎಂದು ಎರಡು ಅಗಸಿಗಳಿವೆ. ಅಲ್ಲದೇ ಎರಡು ಕಡೆ ದ್ಯಾಮವ್ವನ ಗುಡಿಗಳಿದ್ದು, ಒಬ್ಬಳು ಅಶ್ವಾರೂಢಳಾಗಿದ್ದು, ಇನ್ನೋರ್ವ ದೇವಿ  ಸಿಂಹವಾಹಿನಿಯಾಗಿರುವಳು. ಆದರೆ ಜಾತ್ರೆಯಂದು ಮಾತ್ರ ಇಬ್ಬರೂ ಒಂದೇ ಸದರ ಕಟ್ಟೆಯಲ್ಲಿ  ವಿರಾಜಮಾನರಾಗುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement