10ನೇ ತರಗತಿ ವಿದ್ಯಾರ್ಥಿಗಳಿಗೆ 50:50 ಯಶಸ್ವಿ
ಗುಲ್ಬರ್ಗ: ಮೈಸೂರಿನ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಗುಲ್ಬರ್ಗ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯಗಳ ಪ್ರಾಯೋಜಕತ್ವ ಹಾಗೂ ಸಹಯೋಗದಲ್ಲಿ ಹೈ-ಕ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದಕ್ಕಾಗಿ ಆಕಾಶವಾಣಿ ಕೇಂದ್ರ 50 ದಿನಗಳ ನೇರ ಪ್ರಸಾರದಲ್ಲಿ ಪಾಠಗಳನ್ನು ಪ್ರಸಾರ ಮಾಡುವ ಯೋಜನೆ ರೂಪಿಸಿದೆ.
ಜ.6ರಿಂದ ಮಾ.14ರವರೆಗೆ ಭಾನುವಾರ ಮತ್ತು ಸರ್ಕಾರದ ರಜಾದಿನ ಹೊರತುಪಡಿಸಿ ಪ್ರತಿದಿನ ಬೆ.10.30 ರಿಂದ 11.30ರವರೆಗೆ ನಿರಂತರವಾಗಿ ಪ್ರಸಾರ ಮೂಡಿಬರಲಿದೆ. ಈ ಪಾಠಮಾಲೆಯಲ್ಲಿ ವಿವಿಧ ವಿಷಯಗಳಲ್ಲಿ ಅನುಭವ ಹೊಂದಿರುವ ಶಿಕ್ಷಕರು ಪಾಠ ಮಾಡಲಿದ್ದಾರೆ. ನೇರ ಪ್ರಸಾರವಾಗುವುದರಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಫೋನ್ ಮೂಲಕ ಭಾಗವಹಿಸಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು.
50 ದಿನಗಳ ನಿರಂತರ ಪ್ರಸಾರವಿರುವುದರಿಂದ ಈ ಕಾರ್ಯಕ್ರಮಕ್ಕೆ 50-50 ಯಶಸ್ವಿ ಎಸ್ಸೆಸ್ಸೆಲ್ಸಿ ಎಂದು ಹೆಸರಿಡಲಾಗಿದೆ ಎಂದು ಕಾರ್ಯಕ್ರಮ ಮುಖ್ಯಸ್ಥೆ ಅಂಜನಾ ಯಾತನೂರ ತಿಳಸಿದ್ದಾರೆ.