ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೈದಿಗಳೊಂದಿಗೆ ಸಹಭೋಜನ

Lingaraj Badiger
Updated On : 2 Jan 2014, 11:53 am

ಗುಲ್ಬರ್ಗ: ಮಾನಸಿಕವಾಗಿ ಬಹಳಷ್ಟು ಕೈದಿಗಳು ನೊಂದಿರುವುದರಿಂದ ಅವರ ಜೊತೆ ಹಬ್ಬ ಆಚರಿಸಿದರೆ ಅವರ ಮನಸ್ಸಿನ ನೋವು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ ಎಂದು ಜಿಪಂ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ ಹೇಳಿದರು.
ಅವರು ಹೊಸ ವರ್ಷ ಹಾಗೂ ಎಳ್ಳ ಅಮವಾಸ್ಯೆ  ನಿಮಿತ್ತ ಕೇಂದ್ರ ಕಾರಾಗೃಹದಲ್ಲಿ ಕೈದಿಬಂಧುಗಳ ಜೊತೆ ಸಹ ಭೋಜನ ಮಾಡಿ ಮಾತನಾಡಿದರು. ಜಿಪಂ ಸದಸ್ಯ ಈರಾರೆಡ್ಡಿ ಕೋಡ್ಲಾ ಮಾತನಾಡಿ, ಹೊರಗಡೆ ಇರುವವರು ತಮ್ಮ ಬಂಧು- ಬಾಂಧವರೊಂದಿಗೆ ಹಬ್ಬಗಳನ್ನು ಆಚರಿಸುತ್ತಾರೆ. ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಕೈದಿಗಳು ಒಂದು ದಿನದ ಮಟ್ಟಿಗಾದರೂ ಖುಷಿಯಾಗಿರಲೆಂದು ಈ ಹಬ್ಬವನ್ನು ಕಾರಾಗೃಹದಲ್ಲಿ ಆಚರಿಸಲಾಯಿತು ಎಂದರು. ಈ ವೇಳೆ ಶಾಂತಕುಮಾರ ಬಿರಾದಾರ  ಮಹ್ಮದ್ ಅಲಿ ಮೌಲಾನಾ ಗುತ್ತೇದಾರ, ಪವನಕುಮಾರ ವಳಕೇರಿ, ಪರಮೇಶ್ವರ ಹಾಗೂ ಕಾರಾಗೃಹದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement