ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಲಭೀಮೇಶ್ವರ ಕಾರ್ತಿಕೋತ್ಸವ

Lingaraj Badiger
Updated On : 2 Jan 2014, 11:59 am

ಸುರಪುರ: ಸಮೀಪದ ಹಸನಾಪುರದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಬುಧವಾರ ಗೋಣಿಮಟ್ಟಿ ಬಲಭೀಮೇಶ್ವರ ದೇವರ ಅದ್ಧೂರಿ ಮೆರವಣಿಗೆ ಜರುಗಿತು. ಮಂಗಳವಾರ ಸಂಜೆ 5 ಗಂಟೆಗೆ ಹೆಮನೂರಿನ ಹತ್ತಿರದ ಕೃಷ್ಣಾ ನದಿಗೆ ತೆರಳಿ ದೇವರ ಗಂಗಾಸ್ನಾನ ಮಾಡಿಸಲಾಯಿತು.
ನಂತರ ರಾತ್ರಿ 12 ಗಂಟೆಗೆ ಆಗಮಿಸಿದ ದೇವರನ್ನು ರಂಗಂಪೇಟೆಯ ಹನುಮಾನ ದೇವಸ್ಥಾನದಿಂದ ಬಾಜಾ ಭಜಂತ್ರಿಗಳೊಂದಿಗೆ ಹಸನಾಪುರದ ಬಸವೇಶ್ವರ ದೇವಸ್ಥಾನದ ಸದರ ಕಟ್ಟಿಯವರೆಗೆ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು. ದಾರಿಯುದ್ದಕ್ಕೂ ಅನೇಕ ಭಕ್ತರು ದೇವರಿಗೆ ನೀರು ನೀಡಿ ಕಾಯಿ ಕರ್ಪೂರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement