ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮನೆ ಮಂದಿರ ಆಗಲಿ: ನಾಲವಾರ ಶ್ರೀ ಆಶಯ

Lingaraj Badiger
Updated On : 2 Jan 2014, 11:53 am

ಗುಲ್ಬರ್ಗ/ಶಹಾಬಾದ್: ಮಾನವ ತನ್ನ ಕೆಟ್ಟ ವಿಚಾರಗಳನ್ನು ಬಿಟ್ಟು, ಮನೆಯಲ್ಲಿ ಗುರುಹಿರಿಯರಿಗೆ ಗೌರವ, ದೇವರಲ್ಲಿ ಭಕ್ತ ಭಾವನೆಗಳಿಂದ ಇದ್ದಾಗ ಅಂಥ ಸ್ಥಳ ದೇವ ಮಂದಿರವಾಗುತ್ತದೆ. ಅಂಥ ಗೃಹಗಳಲ್ಲಿ ಗುರುವಿನ ಪ್ರವೇಶವಾಗುತ್ತಿದೆ. ಅಂಥ ಮನೆಯಲ್ಲಿ ಭಕ್ತಿಯ ಸೆಲೆ ಉಕ್ಕಿ ಆ ಮನೆ ದೇವಮಂದಿರವಾಗುತ್ತದೆ ಎಂದು ಸುಕ್ಷೇತ್ರ ನಾಲವಾರದ ಡಾ. ಸಿದ್ದ ತೋಟೆಂದ್ರ ಶ್ರೀ ಹೇಳಿದರು. ಲಾಡ್ಲಾಪುರ ಗ್ರಾಮದ ಭಕ್ತರಾದ ಸಾಬಯ್ಯ ಗುತ್ತೇದಾರ ಪರಿವಾದರವರು ಆಯೋಜಿಸಿದ್ದ ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ಕಾರ್ಯಕ್ರಮದಲ್ಲಿ ಭಕ್ತಿಯ ತುಲಾಭಾರ ಸ್ವೀಕರಿಸಿ ಮಾತನಾಡಿದರು. ಖ್ಯಾತ ಉದ್ಯಮಿ ಸತೀಷ ಗುತ್ತೇದಾರ, ಶರಣಗೌಡ ಸಂಕನೂರ, ರಾಚಣ್ಣ ಕುಂಬಾರ, ಹಣಮಂತ ಸಂಕನೂರ, ಈರಣ್ಣ ಮಲ್ಕಂಡಿ, ಹಣಮಂತ ಗಲಗಿನ, ಶರಣಯ್ಯ ಪೂಜಾರಿ, ಪೋಮು ರಾಠೋಡ, ಶಿವಕುಮಾರ್ ಲಾಡ್ಲಾಪುರ ಉಪಸ್ಥಿತರಿದ್ದರು. ಶ್ರೀಮಠದ ವಿದ್ಯಾರ್ಥಿ ಕಾಶಿನಾಥ ಸ್ವಾಗತ ಗೀತೆ ಹಾಡಿದರು. ಶರಣಯ್ಯ ಸ್ವಾಮಿ ಗವಾಯಿಗಳು ಕೊಂಚೂರ ಭಕ್ತಿಗೀತೆ ಹಾಡಿದರು. ಶಾಂತಕುಮಾರ್ ಎಣ್ಣಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement