ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೆ ಬಾ ಕಂಡೆ ದಾಸಯ್ಯ
ಶಹಾಪುರ: ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು, ಎಂಬಂತೆ ರಾಘವೇಂದ್ರ ವಿಠಲ ದಾಸರು ಎಂದು ಗುರುಗಳಿಂದ ಅನುಗ್ರಹಪಡೆದ ಶಹಾಪುರದ ಗೋಪಿನಾಥ ಸಂಚಾರ ನಿಮಿತ್ತ ಬಂದಾಗ ಬೆಳಗಿನ ಜಾವದಲ್ಲಿ ಬೀದಿಗಳಲ್ಲಿ ಸಂಚರಿಸುತ್ತ ದಾಸರಾಗಿ ಹಲವಾರು ದೇವರ ನಾಮಗಳನ್ನು ಸ್ತುತಿಸುತ್ತ ಭಕ್ತಿಯ ವಾತಾವರಣಕ್ಕೆ ಸಾಕ್ಷಿಯಾದರು.
ಶ್ರೀವಾದಿರಾಜ ತೀರ್ಛರ ತೀರ್ಥಪ್ರಬಂಧ ನಿಯಮಾನುಸಾರ ಪ್ರದಕ್ಷಿಣಾಕಾರವಾಗಿ ದೇಶ ಸಂಚಾರ ಮಾಡುವುದು ಭಗವಂತನ ನಾಮಸ್ಮರಣೆ ಪ್ರಮುಖವಾಗಿದ್ದು, ಸದ್ಯ ಪಂಡರಾಪುರದಿಂದ ಬಂದಿದ್ದು ನಡುಗಡ್ಡೆಯ ಶ್ರೀಜಿತಾಮಿತ್ರತೀರ್ಥರ ಆರಾಧನೆ ಮುಗಿಸಿಕೊಂಡು ಹೊಸಪೇಟೆಗೆ ತೆರುಳುವುದಾಗಿ ತಿಳಿಸಿದ ದಾಸರು ಸಾಧ್ಯವಾದಷ್ಟು ಭಗವಂತನ ಸೇವೆ ಮಾಡುವ ಅವಕಾಶ ಸಿಕ್ಕದ್ದು, ದಾಸರ ರಚನೆಗಳನ್ನು ಜನಮಾನಸದಲ್ಲಿ ತಲುಪಿಸಬೇಕು ಎಂಬುವ ಉದ್ದೇಶ ಹೊಂದಿದೆ. ದಾರಿಗುಂಟ ಸಮಸ್ತ ಜನತೆ ಊರಿಗೆ ಬಂದರೆ ದಾಸಯ್ಯ ನಮ್ಮ ಕೇರೆಗೆ ಬಾ ಕಂಡ್ಯ ದಾಸಯ್ಯ ಎನ್ನುತ್ತ ದಾಸರನ್ನು ಗೌರವ ಪೂರ್ವಕವಾಗಿ ಸ್ವಾಗತಿಸುತ್ತಿರುವುದು ಶ್ರೀಹರಿಯ ಸೇವೆ ಮಾಡಲು ಇನ್ನಷ್ಟು ಪ್ರೇರಣೆ ನೀಡಿದೆ ಎನ್ನುತ್ತಾರೆ ರಾಘವೇಂದ್ರ ವಿಠ್ಠಲ ದಾಸರು.