ಬ್ರಾಹ್ಮಣ ನಿಗಮ ಮಂಡಳಿ ಸ್ಥಾಪಿಸಲು ಸಚಿವರಿಗೆ ಆಗ್ರಹ
ಗುಲ್ಬರ್ಗ:ರಾಜ್ಯದಲ್ಲಿ ಬ್ರಾಹ್ಮಣ ಸಮಾಜದ ಸರ್ವೋತೋಮುಖ ಅಭಿವೃದ್ಧಿಗಾಗಿ ಬ್ರಾಹ್ಮಣ ನಿಮಗ ಮಂಡಳಿ ಸ್ಫಾಪಿಸಬೇಕೆಂದು ಗಾಯತ್ರಿ ಬ್ರಾಹ್ಮಣ ಮಹಿಳಾ ಟ್ರಸ್ಟ್ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಸಮುದಾಯದಲ್ಲಿ ಬಡವರಲ್ಲಿ ಕಡು ಬಡವರಿದ್ದಾರೆ. ಅನೇಕ ಸರ್ಕಾರದ ಸೌಲಭ್ಯಗಳಿಂದ ಅವರು ವಂಚಿತರಾಗಿದ್ದಾರೆ. ಬಡತನದಿಂದ ಉನ್ನತ ಶಿಕ್ಷಣವವಿಲ್ಲದೆ ಬದುಕಿಗೆ ಆರ್ಥಿಕ ಭದ್ರತೆಯಿಲ್ಲದೆ ಬ್ರಾಹ್ಮಣರ ಬದುಕು ಕೇವಲ ಪೂಜೆ, ಪುನಸ್ಕಾರಗಳ ಮೂಲಕ ಸಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಬಡ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪದವಿ ಹಾಗೂ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬ್ಯಾಂಕ್ಗಳಿಂದ ಶಿಕ್ಷಣ ಸಾಲ ಮೀಸಲಾತಿಯೂ ಸಿಗುತ್ತಿಲ್ಲ. ಆದ್ದರಿಂದ ಬ್ರಾಹ್ಮಣ ಸಮಾಜದ ಸರ್ವೋತೋಮುಖ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಬ್ರಾಹ್ಮಣ ನಿಮಗ ಮಂಡಳಿ ಸ್ಥಾಪಿಸಬೇಕೆಂದು ಅಧ್ಯಕ್ಷೆ ರಾಜಶ್ರೀ ದೇಶಮುಖ ಮನವಿ ಮಾಡಿದ್ದಾರೆ.