11ರಂದು ಹತ್ತರ ಭಯ ಹತ್ತಿರ ಬೇಡ
ಗುಲ್ಬರ್ಗ: ನಗರದ ಶಹಾಬಜಾರದ ಚನ್ನಮಲ್ಲೇಶ್ವರ ಪ್ರೌಢಶಾಲೆ ಪರುಷ ಮಠದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಜ.11ರಂದು ಬೆ.11ಕ್ಕೆ ಹತ್ತರ ಭಯ ಹತ್ತಿರ ಬೇಡ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಗೌಡ ತಿಳಗೂಳ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಜೀವನದ ಪ್ರಮುಖ ತಿರುವು ಎಂದೇ ಕರೆಯಲಾದ ಹಂತ ಎಸ್ಸೆಲ್ಸೆಲ್ಸಿ. ಈ ವಿದ್ಯಾರ್ಥಿಗಳು ಎದುರಿಸುವ ಪರೀಕ್ಷಾ ಭಯ, ಆತಂಕ ಮುಂತಾದ ಮಾನಸಿಕ ಗೊಂದಲಗಳನ್ನು ನಿವಾರಿಸಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಶುದ್ಧ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರತಿಷ್ಠಾನದ ಹೆಮ್ಮೆಯ ವಿಷಯವಾಗಿದೆ ಎಂದರು.
ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ
ಗುಲ್ಬರ್ಗ: ಅವರಾದ(ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಕ್ಷರ ಭಾರತ ಕಾರ್ಯಕ್ರಮದ ಅಡಿಯಲ್ಲಿ ಎರಡನೇ ಹಂತದ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ ಏರ್ಪಡಸಲಾಗಿತ್ತು. ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಮಾಳಗೆ ಕಾರ್ಯಕ್ರಮ ಉದ್ಘಾಟಿಸಿದರು. ಪಿಡಿಓ ಸುಧಾ ಶಿಬಿರಾರ್ಥಿಗಳ ಕುರಿತು ಮಾತನಾಡಿದರು. ಉಪ ಪ್ರಾಂಶುಪಾಲ ಶಿವಾನಂದ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತರಬೇತಿಯ ಸಂಪನ್ಮೂಲ ವ್ಯಕ್ತಿ ಪ್ರಹ್ಲಾದರಾವ್ ಕುಲ್ಕಣಿ ಹಾಗೂ ಶ್ರೀದೇವಿ ಭಾಗವಹಿಸಿದ್ದರು. ಶ್ರೀಮಂತ ಕುಂಬಾರ ಕಾರ್ಯಕ್ರಮ ವಂದಿಸಿದರು.