ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

20ಕ್ಕೆ ಯೋಗ ಶಿಬಿರ

Rashmi Kasaragodu
Updated On : 4 Jan 2014, 12:02 pm

ಗುಲ್ಬರ್ಗ:ಅಧ್ಯಾತ್ಮಿಕ ಪ್ರವಚನಾ ಸಮಿತಿ ಹಾಗೂ ವಿಕಾಸ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ  ಯೋಗಗಳಿಂದ ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಶ್ವಾಸಗುರು ವಚನಾಂದ ಸ್ವಾಮಿಯವರ ಯೋಗ ಶಿಬಿರವನ್ನು ಜನವರಿ 20 ರಿಂದ ಒಂದು ವಾರ ಮಹಾನಗರದ ಸಾರ್ವಜನಿಕ ಉದ್ಯಾನವನದ ರೋಟರಿ ಕ್ಲಬ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಾತ್ಮಿಕ ಪ್ರವಚನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ ತಿಳಿಸಿದ್ದಾರೆ. ಬೆಳಗ್ಗೆ 5.30 ಗಂಟೆಯಿಂದ 7 ಗಂಟೆಯವರಿಗೆ ಯೋಗ ಹಾಗೂ ಸಂಜೆ 6 ಗಂಟೆಯಿಂದ 7.30 ಗಂಟೆಯವರೆಗೆ ಯುವಕರಿಗೆ ಹಾಗೂ ಹಿರಿಯರಿಗೆ ವ್ಯಕ್ತಿತ್ವ ವಿಕಸನ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ವಿಚಾರ ಸಂಕಿರಣ
ಗುಲ್ಬರ್ಗ: ಡಾ. ಅಂಬೇಡ್ಕರ್ ಹಾಗೂ ಡಾ. ಜಗಜೀವನ ರಾಮ್ ಬಾಲಕರ ವಸತಿ ನಿಲಯಗಳ ಸಂಯುಕ್ತಾಶ್ರಯದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವದ ನಿಮಿತ್ತ ಜ.5ರಂದು ಸಾಯಂಕಾಲ 4ಕ್ಕೆ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು  ಜಿಲ್ಲಾ ಉಪಾಧ್ಯಕ್ಷ ನಾಗಾರ್ಜುನ ದೊಡ್ಡಮನಿ ತಿಳಿಸಿದ್ದಾರೆ. ಜಿಲ್ಲೆಯ ಅಂಬೇಡ್ಕರ್ವಾದಿಗಳು, ದಲಿತ ನಾಯಕರು, ವಿಚಾರವಂತರು, ಸಮಾಜ ಚಿಂತಕರು, ವಿದ್ಯಾರ್ಥಿಗಳು, ಯುವ ಹೋರಾಟಗಾರರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಕಟ್ಟೆ ಧ್ವಂಸ; ಖಂಡನೆ
ಚಿತ್ತಾಪುರ: ಜೇವರ್ಗಿ ತಾಲೂಕಿನ ಇಟಗಾ ಗ್ರಾಮದಲ್ಲಿನ ಕೋಲಿ ಸಮಾಜದ ವಿಠ್ಠಲ್ ಹೇರೂರ್ ಅವರ ಸ್ಮರಣಾರ್ಥ ನಿರ್ಮಿಸಿದ ಕಟ್ಟೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತಾಲೂಕು ಕೋಲಿ ಸಮಾಜ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ತಿಳಿಸಿದ್ದಾರೆ. ಅಧ್ಯಕ್ಷ ದೇವಿಂದ್ರ ತಳವಾರ, ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಟೀಕಾರ, ಕರ್ಣರಾಜ ಅಲ್ಲೂರ, ಮಾರುತಿ ಇವಣಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಿಪ್ಪಣ್ಣ ಇಲ್ಲಾಳ
ಸೇಡಂ: ತಾಲೂಕಿನ ಪಿಎಲ್ಡಿ ಬ್ಯಾಂಕಿನ ಮಾಜಿ ಕಾರ್ಯದರ್ಶಿ, ಬಿಜೆಪಿ ಮುಖಂಡ ತಿಪ್ಪಣ್ಣ ಇಲ್ಲಾಳ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 75 ವಯಸ್ಸಾಗಿತ್ತು. ಇಬ್ಬರು ಪುತ್ರರು, ಪುತ್ರಿ ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಅವರ ಕಟ್ಟಾ ಅನುಯಾಯಿ, ಮುನ್ನೂರು- ರೆಡ್ಡಿ ಸಮಾಜದ ಮುಖಂಡರಾಗಿದ್ದ ಘಾಳಪ್ಪ ಇಲ್ಲಾಳ ಸಹೋದರರಾಗಿದ್ದರು. ಶನಿವಾರ ಮ. 3ರ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement