ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧಮಕಿ ಹಾಕುವ ಸಂಸ್ಕೃತಿ ಗುತ್ತೇದಾರರಿಗೆ ಸಲ್ಲಬೇಕು

Rashmi Kasaragodu
Updated On : 4 Jan 2014, 12:02 pm

ಆಳಂದ: ಮಾನಸಿಕವಾಗಿ ಸುಭಾಷ ಗುತ್ತೇದಾರರು ಆಧಾರವಿಲ್ಲದ ಆರೋಪ ಮಾಡಿದ್ದಾರೆ. ಇವರ ಹೇಳಿಕೆಯಲ್ಲಿ ದ್ವಂದ್ವವಿದ್ದು, ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಬಿ.ಆರ್. ಪಾಟೀಲ್ ಧಮಕಿ ಹಾಕುತ್ತಿದ್ದಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಧಮಕಿ ಹಾಕುವ ಸಂಸ್ಕೃತಿ ಬಿ.ಆರ್. ಪಾಟೀಲರಲ್ಲಿಲ್ಲ. ಅದೇನಿದ್ದರೂ ಗುತ್ತೇದಾರರಿಗೆ ಮಾತ್ರ ಸಲ್ಲಬೇಕೆಂದು ಶಾಸಕ ಬಿ.ಆರ್. ಪಾಟೀಲ ತಿರುಗೇಟು ನೀಡಿದ್ದಾರೆ.
ಪ್ರತಿಕಾಗೋಷ್ಠಿ ನಡೆಸಿ, ತಾಲೂಕಿನಲ್ಲಿ ಕಾಮಗಾರಿಗಳು ಪ್ರಾರಂಭಿಸದೆ ವಿಳಂಬ ಮಾಡುತ್ತಿದ್ದಾರೆ. ಪಡಸಾವಳಿ, ನಿಂಬರ್ಗ ಕೆರೆ ಪ್ರಾರಂಭಿಸಿಲ್ಲ, ಬಸವ ವಸತಿ ನಿಲಯಗಳ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿದರು. ಅದಕ್ಕೆ ಶಾಸಕರು ಅನುಮತಿ ನೀಡುತ್ತಿಲ್ಲ ಎಂದು ಹೇಳಿಕೆ ನೀಡುತ್ತಿರುವ ಗುತ್ತೇದಾರರಿಗೆ ಕಿವಿಮಾತು ಹೇಳುವುದೆನೆಂದರೆ ನಾನು ಏನೇ ಮಾಡಿದರು ಅದು ಕಾನೂನು ಬದ್ಧವಾಗಿರಬೇಕೆಂಬುದು ನನ್ನ ನಿಲುವು. ಬಸವ ವಸತಿ ಯೋಜನೆಯ ಆಯ್ಕೆ ಪ್ರಕ್ರಿಯೆ ಪಾರದರ್ಶಕತೆಯಿಂದ ನಡೆದಿಲ್ಲ. ಅಧಿಕಾರಿ ವರ್ಗದವರಿಂದ ವರದಿ ತರಿಸಿ ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿ ನಾನು ಅದಕ್ಕೆ ಅನುಮತಿ ನೀಡುತ್ತೇನೆ.
ಗುತ್ತೇದಾರರೇ ನೇರ ಹೊಣೆ: ಗ್ರಾಮಸಭೆಗಳು ನಡೆದರೂ ತಕರಾರು ನಡೆದಿರಬಹುದು ಅದರಲ್ಲಿ ಕೆಲ ಜನರ ಹಿತಾಶಕ್ತಿ ಅಡಗಿದೆ. ಯಾವುದೇ ಕಾಮಗಾರಿಗಳು ವಿಳಂಬವಾಗುತ್ತಿಲ್ಲ. ನಿಂಬರ್ಗ ಕೆರೆ ನನ್ನ ಪ್ರಯತ್ನದಿಂದ ಪ್ರಾರಂಭವಾಗಿ ಒಂದು ಹಂತಕ್ಕೆ ಬಂದಿದೆ. ಗುತ್ತೇದಾರರು ಶಾಸಕರಾಗಿದ್ದಾಗ ನಿಂಬರ್ಗ, ಪಡಸಾವಳಿ, ಕೊತನಹಿಪ್ಪರ್ಗ ಈ ಮೂರು ಕೆರೆಗಳ ಭೂಸ್ವಾಧಿನ ಪ್ರಕ್ರಿಯೆ ಆರಂಭವಾಗಿಲ್ಲ. ನಾನ್ನ ಪ್ರಯತ್ನ ನೋಟಿಸ್ ಜಾರಿ ಮಾಡಿಸಿದ್ದೇನೆ. ಭೂ ಸ್ವಾಧಿನದ ಬಗ್ಗೆ ಸೂಚನೆಯಿಲ್ಲದೆ ಜಮೀನಿನ ಮಾಲೀಕರು ಕಾಮಗಾರಿ ಮಾಡುವುದಕ್ಕೆ ಒಪ್ಪುತ್ತಿಲ್ಲ. ಈ ವಿಳಂಬಕ್ಕೆ ಸುಭಾಷ ಗುತ್ತೇದಾರರೇ ನೇರ ಹೊಣೆ ಎಂದು ಪಾಟೀಲ ಆರೋಪಿಸಿದ್ದಾರೆ.
ಪುರಸಭೆ ನಿಷ್ಕ್ರೀಯವಾಗಿದೆ: ಮಾಜಿ ಶಾಸಕ ಗುತ್ತೇದಾರ ಕಪಿಮುಷ್ಠಿಗೆ ಸಿಕ್ಕು ಪುರಸಭೆ ಆಡಳಿತ ಸಂಪೂರ್ಣ ನಿಷ್ಕ್ರೀಯ. ಜಿಲ್ಲಾಧಿಕಾರಿ ಭೇಟಿ ಕೊಟ್ಟು ಆಡಳಿತ ವ್ಯವಸ್ಥೆ ಸುಧಾರಿಸಬೇಕೆಂದು ಒತ್ತಾಯಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ಮೂರ್ನಾಲ್ಕು ತಿಂಗಳಾದರು ಸುಧಾರಣೆ ಮಾಡುವ ಬದಲು ಕುಸಿದು ಹೋದ ಕಾರಣ ನಾಗರಿಕರು ಸ್ವಚ್ಛ ನೀರಿಗಾಗಿ ಮತ್ತು ಸಣ್ಣ, ಪುಟ್ಟ ಕೆಲಸಗಳಿಗೆ ಹತ್ತಾರು ಬಾರಿ ಕಚೇರಿಗೆ ಅಲೆದರು ಅಲ್ಲಿ ಸ್ಪಂದನೆ ಇಲ್ಲವಾಗಿದೆ. ಯಾರು ಕೇಳುವವರಿಲ್ಲ ಎಂದು ಟೀಕಿಸಿದರು.
ಪುರಸಭೆಗೆ ಭೇಟಿ ನೀಡಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಇದ್ದರು ಅನುಷ್ಠಾನವಾಗುತ್ತಿಲ್ಲ. ಕಾರ್ಮಿಕರಿಗೆ ವೇತನವಿಲ್ಲ. ಕಸ ಗೂಡಿಸುವರು, ಬೀದಿ ಬಲ್ಬಹಾಕುವವರು ಇಲ್ಲ. ಜಿಲ್ಲಾಧಿಕಾರಿ ತಕ್ಷಣವೇ ಪುರಸಭೆಗೆ ಭೇಟಿ ನೀಡಲು ಆಗ್ರಹಿಸಿದರು.
ಸರ್ಕಾರ ಕಬ್ಬಿನ ಬೆಲೆ ನಿರ್ಧಾರ ಮಾಡದೆ ಗೊಂದಲದಲ್ಲಿ ಸಿಕ್ಕಿಕೊಂಡು ಬೆಳೆಗಾರರನ್ನು ಅತಂತ್ರ ಮಾಡಿದೆ. ಕಬ್ಬು ಸಮಯಕ್ಕೆ ಸಾಗಿಸಿ ನುರಿಯುವಂತೆ ರಾಜ್ಯದ ಕಬ್ಬು ಆಯುಕ್ತರಿಗೆ ಪತ್ರ ಬರೆಯಲಾಗಿದೆ. ತಕ್ಷಣವೇ ಸ್ಥಳೀಯ ಕಾರ್ಖಾನೆಯವರ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಸೂಕ್ತ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement