ನಾಳೆ ಕಲ್ಯಾಣನಾಡು ಪತ್ರಿಕೆ ಬಿಡುಗಡೆ
ಗುಲ್ಬರ್ಗ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಜ.5ರಂದು ಬೆ.10.30ಕ್ಕೆ ಕಲ್ಯಾಣನಾಡು ಮಾಸಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗಲಿದೆ. ರಟಕಲ್ ವಿರೂಪಾಕ್ಷ ಶಿವಾಚಾರ್ಯರು ಆಶೀರ್ವಚನ ನೀಡಲಿದ್ದಾರೆ. ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ್ ಸೇಡಂ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ವೈಜನಾಥ ಪಾಟೀಲ್ ಮಾಸಪತ್ರಿಕೆ ಬಿಡುಗಡೆ ಮಾಡುವರು. ಮಾಜಿ ಸಚಿವ ಎಸ್.ಕೆ. ಕಾಂತಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಎಂಎಲ್ಸಿ ಕೆ.ಬಿ. ಶಾಣಪ್ಪ, ಅಲ್ಲಂಪ್ರಭು ಪಾಟೀಲ್, ಅಮರನಾಥ ಪಾಟೀಲ್, ಹೈ-ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಸಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಪ್ಪಾರಾವ್ ಅಕ್ಕೋಣಿ, ಪಿ.ಎಂ. ಮಣ್ಣೂರ, ಲಕ್ಷ್ಮಣ ದಸ್ತಿ, ಅರುಣಕುಮಾರ ಪಾಟೀಲ್, ವಿಜಯಕುಮಾರ ತೇಗಲತಿಪ್ಪಿ, ಕೆ. ನೀಲಾ, ಮೀಲಾಕ್ಷಿ ಬಾಳಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.