ಹೊಲಿಗೆ ಉತ್ಪಾದನ ಘಟಕ ಆರಂಭಕ್ಕೆ ಆಗ್ರಹ
ಗುಲ್ಬರ್ಗ: ಸಮಾಜ ಕಲ್ಯಾಣ ಇಲಾಖೆಯು ಹೊಲಿಗೆ ಉತ್ಪಾದನ ಘಟಕ ಮುಚ್ಚಲ್ಪಿಟ್ಟಿದ್ದು, ಕೂಡಲೇ ಅದನ್ನು ಆರಂಭಿಸಬೇಕೆಂದು ಪರಿವರ್ತನಾ ವೇದಿಕೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್. ಆಂಜನೇಯ ಅವರಿಗೆ ಮನವಿ ಮಾಡಿದೆ. ಮುಚ್ಚಲ್ಪಟ್ಟ ಹೊಲಿಗೆ ಉತ್ಪಾದನ ಘಟಕ ಆರಂಭಿಸಿ ಈ ಘಟಕದಲ್ಲಿ ಕರ್ತವ್ಯ ನಿರ್ವಹಿಸಿರುವ ನೌಕರರಿಗೆ ಸೇವೆ ಮುಂದುವರಿಸಲು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ನಿರ್ದೇಶಕರು ಮತ್ತು ಉಚ್ಚ ನ್ಯಾಯಾಲಯದ ನಿರ್ದೇಶನವಿದೆ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಿದ್ದಾರ್ಥ ದಿಗಸಂಗಿಕರ್, ರಾಹುಲ್ ಮೇಲ್ಮನಿ ಸಚಿವರಿಗೆ ಒತ್ತಾಯಿಸಿದರು.