ಅಯ್ಯಪ್ಪಸ್ವಾಮಿ ಮಂಡಲ ಪೂಜೆ: ಮೆರವಣಿಗೆ
ಲಿಂಗಸ್ಗೂರು: ಪಟ್ಟಣದಲ್ಲಿ ಶಬರಿಮಲೈ ಅಯ್ಯಪ್ಪಸ್ವಾಮಿ ಮಂಡಲಪೂಜೆ ಅಂಗವಾಗಿ ಸ್ವಾಮಿ ಮಾಲೆ ಧರಿಸಿದ ಭಕ್ತರಿಂದ ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಭಕ್ತರು ಮಂಡಲಪೂಜೆ ನಿಮಿತ್ತ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಗಡಿಯಾರ ಚೌಕ, ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮರವಣಿಗೆ ನಡೆಸುತ್ತಾ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳಿದರು. ಈ ಮಧ್ಯೆ ಭಜನೆ, ಅಯ್ಯಪ್ಪಸ್ವಾಮಿ ಸ್ತೋತ್ರ, ಭಕ್ತಿಗೀತೆಗಳನ್ನು ಹಾಡುತ್ತಾ ಕುಣಿಯುತ್ತಾ ಮರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಮಾಲೆ ಧರಿಸಿದ ಭಕ್ತರಾದ ಸಿದ್ಧರಾಮ ಗುರುಸ್ವಾಮಿ, ಶಿವಕುಮಾರ ಕುಂಬಾರ, ಮಲ್ಲಿಕಾರ್ಜುನ ಮೇಟಿ, ರಾಜೇಶ, ವೀರೇಶ ಪತ್ತಾರ, ಕುಪ್ಪಣ್ಣ, ಮೌನೇಶ ಮುನ್ನೂರು, ಆನಂದ ರೆಡ್ಡಿ ಮುನ್ನೂರು ಮತ್ತಿತರರು ಪಾಲ್ಗೊಂಡಿದ್ದರು.