ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಟೋ ಗ್ಯಾಸ್ ದರ ಇಳಿಕೆಗೆ ಜೈಕರವೇ ಘಟಕ ಮನವಿ

Rashmi Kasaragodu
Updated On : 5 Jan 2014, 12:53 pm

ಇತ್ತೀಚೆಗೆ ಕೇಂದ್ರ ಸರ್ಕಾರ ಮಾಡಿರುವ ಆಟೋ ಗ್ಯಾಸ್ ದರದಲ್ಲಿನ ಹೆಚ್ಚಳದ ಕ್ರಮವನ್ನು ಜೈಕರವೇ ಗುಲ್ಬರ್ಗ ಘಟಕ ಖಂಡಿಸಿದೆ. ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಹೆಚ್ಚಿಸಿರುವ ದರ ತಕ್ಷಣ ಇಳಿಸಬೇಕು. ಈಗಾಗಲೇ ಹೆಚ್ಚಿರುವ ಬಸ್‌ಗಳಿಂದಾಗಿ ತೊಂದರೆಯಲ್ಲಿರುವ ಆಟೋ ಚಾಲಕರಿಗೆ ದರ ಹೆಚ್ಚಳದ ಬರೆ ನೀಡದೆ ಅವರಿಗೂ ಅಗ್ಗದ ದರದಲ್ಲೇ ಇಂಧನ ದೊರಕುವಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ. ಜೈಕರವೇ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಆಟೋ ಚಾಲಕರು, ಸಂಘಟನೆಯ ಕಾಯಂಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ, ಪ್ರಧಾನಿಗೆ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement