ಆಹಾರ ಧಾನ್ಯ ಬಿಡುಗಡೆ
ಯಾದಗಿರಿ: ಯಾದಗಿರಿ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಪಡಿತರ ಚೀಟಿಗಳಿಗೆ ಜನೇವರಿ ಮಾಹೆಗಾಗಿ ಆಹಾರ ಧಾನ್ಯ ಮತ್ತು ಲೆವಿ ಸಕ್ಕರೆಯನ್ನು ಈ ಕೆಳಗಿನಂತೆ ಬಿಡುಗಡೆ ಮಾಡಲಾಗಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರಕ್ಕೆ 1ಕೆಜಿಯಂತೆ ಲೆವಿ ಸಕ್ಕರೆ ಬಿಡುಗಡೆ ಮಾಡಿದೆ. ಅದರಂತೆ ಅಂತ್ಯೋದಯ ಕಾರ್ಡ್ದಾರರಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, ಬಿಪಿಎಲ್ ಏಕಸದಸ್ಯರಿಗೆ 8 ಕಿಲೋ ಅಕ್ಕಿ, 2ಕೆ.ಜಿ. ಗೋಧಿ, ದ್ವಿಸದಸ್ಯರಿಗೆ 17 ಕೆ.ಜಿ. ಅಕ್ಕಿ 3 ಕೆ.ಜಿ. ಗೋಧಿ ಮತ್ತು ತ್ರಿ ಸದಸ್ಯ ಹಾಗೂ ಮೇಲ್ಪಟ್ಟ ಕುಟುಂಬಕ್ಕೆ 25 ಕೆ.ಜಿ. ಅಕ್ಕಿ 5 ಕೆ.ಜಿ. ಗೋಧಿ ತಲಾ ಒಂದು ರು.ನಂತೆ ವಿತರಿಸಲಾಗುತ್ತಿದೆ ಎಂದರು.