ಎಸ್‌ಡಿಎಂಸಿ ನಿರ್ಣಯ ವಿರೋಧಿಸಿ ಪ್ರತಿಭಟನೆ
ಗುಲ್ಬರ್ಗ: ತಾಲೂಕಿನ ಓಕಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಗುರು ಹಾಗೂ ಎಸ್‌ಡಿಎಂಸಿಯವರು ಸಭೆ ಸೇರಿ ಅಡುಗೆಯವರಾದ ಸುನೀತಾ ಅವರನ್ನು ಕೆಲಸದಿಂದ ತೆಗೆದು ಹಾಕುವ ನಿರ್ಣಯ ಕೈಗೊಂಡಿದ್ದು ಸರಿಯಲ್ಲ ಎಂದು ಸಮತಾ ಸೈನಿಕ ದಳ ಗುಲ್ಬರ್ಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜಿಪಂ, ಜಿಲ್ಲಾಡಳಿತದ ಗಮನ ಸೆಳೆಯಿತು. ಈ ಮನವಿ ಪರಿಶೀಲಿಸಿ ತಕ್ಷಣ ಅವರನ್ನು ಮತ್ತೆ ಕೆಲಸಕ್ಕೆ ಮರು ನೇಮಿಸಿಕೊಳ್ಳಬೇಕು ಎಂದು ದಳದ ಸಂಜೀವ ಮಾಲೆ, ಮಹಾದೇವಿ, ಕೃಷ್ಣಪ್ಪ ಮದನಕರ್, ವಿ.ಆರ್. ಚಾಂಬಾಳ್, ಅಮೃತರಾವ ನಾಯ್ಕೋಡಿ, ಶಿವಲಿಂಗಮ್ಮ, ಸುನೀತಾ, ಶ್ರೀನಾಥ, ಪುಂಡಲೀಕರಾವ್, ಶಿವರಾಯ ಹಾವನೂರ್, ಶಿವಶರಣಪ್ಪ ಕರಣೂರ, ನಿರ್ಮಲಾ ಪ್ರತಿಭಟನೆ ನಡೆಸಿ ಕೋರಿದ್ದಾರೆ.