ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಪ್ರದರ್ಶನ
ಗುಲ್ಬರ್ಗ: ಇಲ್ಲಿನ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆಸರೆಯಲ್ಲಿ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ಶನಿವಾರ ಕನ್ನಡ ಭವನದಲ್ಲಿ ನಡೆಯಿತು. ಡಿಡಿಪಿಐ ಬಿ.ಎಸ್. ಪರಮೇಶ, ಕಮಲಾಪುರ ಡಯಟ್ ಪ್ರಾಚಾರ್ಯ ಮೆಹರುನ್ನಿಸಾ ಬೇಗಂ, ಬಿಇಒ ಭರತರಾಜ ಸಾವಳಗಿ, ದತ್ತಪ್ಪ ತಳವಾರ, ವಿಷಯ ಪರಿವೀಕ್ಷಕಿ ಸಿದ್ದಮ್ಮ ಗೋಳಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ವಿಶ್ವನಾಥ ಕಟ್ಟೀಮನಿ, ಅಯ್ಯಪ್ಪ ಅಂಬರಖೇಡ, ಶಿವಾನಂದ ಕೊಪ್ಪದ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿಲ್ಲೆಯ ಎಲ್ಲಾ ವೃತ್ತಿ ಶಿಕ್ಷಣ ಬಳಗದವರು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ನಂದಲಾಲ ಬಡಕೆ, ಅಖ್ತರ್ ಹುಸೇನ್, ಸಿದ್ದಮ್ಮ ದೋತ್ತರ, ಸುರೇಶ ಕುಲ್ಕರ್ಣಿ ಸೇರಿದಂತೆ ವೃತ್ತಿ ಶಿಕ್ಷಣ ಬಳಗದ ಅನೇಕರು ವಸ್ತು ಪ್ರದರ್ಶನದಲ್ಲಿ ಹಾಜರಿದ್ದರು.