ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಗರದಲ್ಲಿ ಸಾವಿತ್ರಿಬಾಯಿ ಫುಲೆ ಸ್ಮರಣೆ

Rashmi Kasaragodu
Updated On : 5 Jan 2014, 12:52 pm

ಗುಲ್ಬರ್ಗ: ನಗರದ ಪ್ರಜ್ಞಾ ಕಾನೂನು ಸಲಹಾ ಸಮಿತಿ, ಸರ್ಕಾರಿ ಬಾಲಕಿಯರ ಮಹಾವಿದ್ಯಾಲಯದ ಸಹಯೋಗದಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಇವರ ಜನ್ಮದಿನ ಆಚರಿಸಿ ಧೀಮಂತ ಶಿಕ್ಷಕಿಯನ್ನು ಸ್ಮರಿಸಲಾಯ್ತು. ಅಕ್ಷರ ಕ್ರಾಂತಿ ಮಾಡಿರುವ ಶಿಕ್ಷಕಿ ಸಾವಿತ್ರಿ ಫುಲೆ ಅವರ ಚರಿತ್ರೆ ಶಾಲಾ ಪಠ್ಯದಲ್ಲಿ ಸೇರಬೇಕು ಎಂದು ಜಿಪಂ ಸದಸ್ಯೆ ಶೋಭಾ ಬಾಣಿ ಸಮಾರಂಭಕ್ಕೆ ಸಸಿ ನೆಟ್ಟು ಚಾಲನೆ ನೀಡಿ ಆಗ್ರಹಿಸಿದರು. ಪಪೂ ಶಿಕ್ಷಣ ಇಲಾಖೆ ನಿರ್ದೇಶಕ ಸಾಲುಂಕೆ, ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಕೆ. ನೀಲಾ, ಮೀನಾಕ್ಷಿ ಬಾಳಿ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗವಹಿಸಿ ಸಾವಿತ್ರಿಬಾಯಿ ಫುಲೆ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮೆಲಕು ಹಾಕಿ ಎಲ್ಲರೂ ಫುಲೆ ಅವರ ಆದರ್ಶಗಳಲ್ಲಿ ಸಾಗಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement