ನಾರಾಯಣ ಕುಂಬಾರಗೆ ರಾಷ್ಟ್ರೀಯ ಕಲಾ ಪುರಸ್ಕಾರ
ಗುಲ್ಬರ್ಗ: ನಗರದ ಕಲಾವಿದ ನಾರಾಯಣ ಕುಂಬಾರ ಅವರು ಉತ್ತರ ಪ್ರದೇಶದಲ್ಲಿರುವ ಶಹರಾನಪುರ ಡೂನ್ ವ್ಯಾಲಿ ಶಾಲೆಯವರು ನಡೆಸಿರುವ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ ಪುರಸ್ಕಾರ ಪಡೆದಿದ್ದಾರೆ. ಅಕ್ರಿಲಿಕ್ ಬಣ್ಣ ಬಳಸಿ ಸಾಧು ಹೆಸರಿನ ಕಲಾಕೃತಿಗೆ ನಾರಾಯಣ ಕುಂಬಾರ ಪುರಸ್ಕಾರ ಪಡೆದಿದ್ದಾರೆ. ನಾರಾಯಣ ಕುಂಬಾರ ಬೀದರ್ ಮೂಲದವರು. ಇಲ್ಲಿನ ಕಾಲೇಜ್ ಆಫ್ ವಿಜ್ಯುವಲ್ ಆರ್ಟ್ನಲ್ಲಿ ಸ್ನಾತಕೋತ್ತರ ಕಲಾ ಅಧ್ಯಯನ ಮಾಡುತ್ತಿದ್ದಾರೆ. ಇದುವರೆಗೂ ಅನೇಕ ಮಹನೀಯರ, ವಿಶೇಷ ವ್ಯಕ್ತಿಗಳ ಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಮುಂಬೈ, ಬೆಂಗಳೂರು, ಚೆನ್ನೈ, ಗೋವಾ, ಕೊಚ್ಚಿ, ಮೈಸೂರು, ಗುಲ್ಬರ್ಗ ಸೇರಿದಂತೆ ಅನೇಕ ಮಹಾನಗರಗಳಲ್ಲಿ ವಿವಿಧ ಸಂಸ್ಥೆಗಳವರು ನಡೆಸಿರುವ ಕಲಾಕೃತಿ ಪ್ರದರ್ಶನದಲ್ಲಿಯೂ ನಾರಾಯಣ ಕುಂಬಾರ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.