ನೂತನ ವರ್ಷಾಚರಣೆ
ರಾಯಚೂರು: ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ)ಯಿಂದ ಈಚೆಗೆ ನಗರದ ಕನಕದಾಸ ಶಿಕ್ಷಣ ಸೇವಾ ಸಂಸ್ಥೆಯ ಅನಾಥ ಮಕ್ಕಳ ಶಾಲೆಯಲ್ಲಿ ನೂತನ ವರ್ಷಾಚರಣೆ ಸಮಾರಂಭ ಆಯೋಜಿಸಲಾಗಿತ್ತು. ಸಂಘಟನೆಯ ನಗರ ಘಟಕದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ನಗರ ಅಧ್ಯಕ್ಷ ವೈ.ಎಸ್. ನಾಗರಾಜ್ ನೇತೃತ್ವದಲ್ಲಿ ಕನಕದಾಸ ಅನಾಥ ಮಕ್ಕಳ ಶಾಲೆಯ ಮಕ್ಕಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ರವಿಕುಮಾರ್ ಬಿಂದಲಬಾವಿ, ಎಂ.ಶಂಕರ್ ಪದಾಧಿಕಾರಿಗಳಾದ ಶರಣಬಸವ, ಕೃಷ್ಣ ಎಂ., ವೀರೇಶ್, ಮಲ್ಲಿಕಾರ್ಜುನ, ರಮೇಶ್, ಪ್ರವೀಣಕುಮಾರ್, ಪ್ರಶಾಂತಕುಮಾರ್, ಪ್ರಸಾದ್, ನವೀನ್ ಕುಮಾರ್ ಸೇರಿದಂತೆ ಅನೇಕರಿದ್ದರು. ಕನಕದಾಸ ಶಾಲೆಯ ಬೋಧಕ ವರ್ಗ, ಸಿಬ್ಬಂದಿ ಇದ್ದರು.