ಪುಟಾಣಿ ವಿಜ್ಞಾನ ಸ್ಪರ್ಧೆಯಲ್ಲಿ ಗುಲ್ಬರ್ಗ ಮಕ್ಕಳ ಸಾಧನೆ
ಗುಲ್ಬರ್ಗ: ನಗರದ ಶಾರದಾ ಪ್ರಾಥಮಿಕ ಶಾಲೆಯ 6 ಮಕ್ಕಳು ಚಿತ್ರದುರ್ಗದ ಸಂಸ್ಥೆ ನಡೆಸುವ ಪುಟಾಣಿ ವಿಜ್ಞಾನ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ಶಾಲೆಯ ಮಕ್ಕಳಾದ ರೋಹಿತ್ ಪವಾರ್ ವಿಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 5ನೇ ರ್ಯಾಂಕ್ ಪಡೆದರೆ, ಇದೇ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಮಲ್ಲಿಕಾರ್ಜುನ 6ನೇ ರ್ಯಾಂಕ್ ಪಡೆದಿದ್ದಾನೆ. ಜಿಲ್ಲಾ ಮಟ್ಟದಲ್ಲಿ ರೇಣುಕಾ, ಶಿವಸ್ವರೂಪ, ದಿವ್ಯಶ್ರೀ ಶಂಕರ 4ನೇ ರ್ಯಾಂಕ್, ತಾಲೂಕು ಮಟ್ಟದಲ್ಲಿ ಶರಣಕುಮಾರ್, ವಿನೀತ ಬಸವರಾಜ ಕ್ರಮವಾಗಿ 2 ಮತ್ತು 3ನೇ ರ್ಯಾಂಕ್ ಪಡೆದಿದ್ದಾರೆ. ಪರೀಕ್ಷೆಗೆ ಮಕ್ಕಳನ್ನು ತರಬೇತಿ ಮಾಡಿದ ರೇಣುಕಾ ಜಮಾದಾರ್ ಇವರಿಗೆ ಉತ್ತಮ ಸಂಘಟಕಿ ಪ್ರಶಸ್ತಿ ದೊರಕಿದೆ. ಮಕ್ಕಳ ಸಾಧನೆಗೆ ಮುಖ್ಯಗುರು ಸಂಜಯ ಸಮಾಣೆ, ಸಹ ಶಿಕ್ಷಕಿಯರಾದ ಶ್ರೀದೇವಿ, ಮಾಯಾ, ಗಿರಿಜಾ, ಸುಮಾವತಿ ಅಭಿನಂದಿಸಿದ್ದಾರೆ.