ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೂಡಬೂಳ ಗ್ರಾಮಕ್ಕೆ ಭೀಮಾ ನೀರು

Rashmi Kasaragodu
Updated On : 5 Jan 2014, 1:00 am

ಶಹಾಪುರ: ಭೀಮಾನದಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಮೂಡಬೂಳ, ಮದ್ರಿಕಿ, ಸಿಂಗನಳ್ಳಿ, ಗೋಗಿ ಗ್ರಾಮಕ್ಕೆ ಪೈಪ್‌ಲೈನ್ ಮೂಲಕ ಕುಡಿಯುವ ನೀರಿಗಾಗಿ 19 ಕೋಟಿ ಪ್ರಸ್ತಾವನೆ ಇದ್ದು ಶೀಘ್ರದಲ್ಲಿಯೇ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.
  ತಾಲೂಕಿನ ಮೂಡಬೂಳ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಜನಸ್ಪಂದನ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂಡಬೂಳ ಗ್ರಾಮಕ್ಕೆ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದ್ದು, ಶಾಶ್ವತ ಪರಿಹಾರದ ಯೋಜನೆ ಮಾಡಿದೆ. ಭೀಮಾ ನೀರು ಪೂರೈಕೆಯಿಂದ ಮಾತ್ರ ಮೂಡಬೂಳ ಸೇರಿದಂತೆ ಕೆಲ ಹಳ್ಳಿಗಳಿಗೆ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ಸರಿಯಾದ ಪ್ರಯತ್ನ ನಡೆದಿದೆ. ಗ್ರಾಮದಲ್ಲಿ ವಿವಿಧ ಹಣಕಾಸು ನೆರವಿನಲ್ಲಿ ಪೈಪ್‌ಲೈನ್ ಜೋಡಣೆ ಕಾರ್ಯ ನಡೆದಿದ್ದು, ಗ್ರಾಮಕ್ಕೆ ಶಾಶ್ವತ ನೀರಿನ ಪರಿಹಾರ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
ವಿದ್ಯುತ್ ಪರಿವರ್ತಕ ಸಮಸ್ಯೆ: ಪ್ರತಿಯೊಂದು ಹಳ್ಳಿಯಲ್ಲಿ ವಿದ್ಯುತ್ ಪರಿವರ್ತಕಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಯಾದಗಿರಿಯಿಂದ ಉತ್ತಮ ಗುಣಮಟ್ಟದ ಟಿ.ಸಿ ಬರುತ್ತಿಲ್ಲ. ಇದರಿಂದ ಕತ್ತಲೆಯಲ್ಲಿ ಕಾಲ ಕಳೆಯುವಂಥ ಸ್ಥಿತಿ ಇದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಿಳಿಸಿದ್ದೇನೆ. ಇದರ ಜೊತೆ ಜೊತೆಗೆ ತಾಲೂಕಿಗೊಂದು ವಿದ್ಯುತ್ ಪರಿವರ್ತಕ ರಿಪೇರಿ ಕೇಂದ್ರ ಪ್ರಾರಂಭಿಸಲು ಸರ್ಕಾರ ಮಟ್ಟದಲ್ಲಿ ನಿರ್ಣಯ ತೆಗೆದುಕೊಂಡಿದ್ದು ಶಹಾಪುರಕ್ಕೆ ರಿಪೇರಿ ಕೇಂದ್ರ ಪ್ರಾರಂಭವಾಗಲಿದ್ದು ಸಮಸ್ಯೆಗೆ ತಕ್ಕಮಟ್ಟಿಗೆ ಸ್ಪಂದನೆ ಸಿಗಲಿದೆ ಎಂದರು.
  ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಸಮಸ್ಯೆಗಳ ಬಗ್ಗೆ ಮನವಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ತಿಪ್ಪಮ್ಮ, ತಹಸೀಲ್ದಾರ್ ಡಿ.ವೈ. ಪಾಟೀಲ್, ವೈದ್ಯಾಧಿಕಾರಿ ಡಾ. ವೆಂಕಟೇಶ, ಅಬಕಾರಿ ಇಲಾಖೆಯ ಸೋಮನಾಯಕ, ದೈಹಿಕ ಶಿಕ್ಷಣಾಧಿಕಾರಿ ಅಣ್ಣಪ್ಪ ಸನದಿ, ಜಿಪಂ ಎಇಇ ಭೀಮರಾವ, ಸಿಡಿಪಿಒ ಟಿ.ಪಿ. ದೊಡ್ಮನಿ, ಜೆ.ಇ. ರಾಜಕುಮಾರ, ಮಲ್ಲಿಕಾರ್ಜುನ, ಪ್ರಕಾಶ, ಪಿಡಿಒ ಹೊನ್ನಪ್ಪ ಚಿಕ್ಕಮೇಟಿ, ಅಂಬ್ಲಪ್ಪ ಹಳಿಸಗರ, ಮತ್ತು ಗ್ರಾಮಸ್ಥರಾದ ಬಸನಗೌಡ ಪಾಟೀಲ್, ಅಶೋಕರಾವ ಮಲ್ಲಾಬಾದಿ, ಗುರಣ್ಣ ಬಡಕಲ್, ಶ್ರೀಶೈಲಪ್ಪ ಸಾಹು, ಮಹಾದೇವಪ್ಪ ಬಬಲಾದಿ, ಕೃಷ್ಣಪ್ಪ ನಾಯ್ಕೋಡಿ, ನಂದಣ್ಣ, ಮನೋಹರ ಕಸ್ತೂರಿ, ಬಂಡೆಪ್ಪ, ಶಾಂತಲಿಂಗಪ್ಪ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement