ರಾಜಕಾರಣಿಗಳಿಗೆ ಇಚ್ಛಾಶಕ್ತಿ ಅಗತ್ಯ: ತುಪ್ಪದ
ಚಿತ್ತಾಪುರ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಅನೇಕ ಕಾಮಗಾರಿಗಳನ್ನು ಮಾಡಿ, ತೆಂಗಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿಯತ್ತ ಸಾಗಿಸಿದ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಅಭಿವೃದ್ಧಿಯಲ್ಲಿ ಹರಿಕಾರರಾಗಿದ್ದಾರೆ ಎಂದು ಗ್ರಾಪಂ ಸದಸ್ಯ ಬಸವರಾಜ ತುಪ್ಪದ ಹೇಳಿದರು. ತಾಲೂಕಿನ ತೆಂಗಳಿ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಅಂಗನವಾಡಿ ಕೇಂದ್ರಗಳಿಗೆ ಪೀಠೋಪಕರಣ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸಮನಿ ಮಾತನಾಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಅಂಗನವಾಡಿ ಕೆಂದ್ರಗಳಿಗೆ ಕುರ್ಚಿ ಹಾಗೂ ಬಡ ಹೆಣ್ಣು ಮಕ್ಕಳಿಗೆ ಸೀರೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮೈಮುದಾಬಿ ಸಲೀಂ, ಸದಸ್ಯರಾದ ಗುರಪ್ಪ ಹಡಪದ್, ಗುಂಡಪ್ಪ ದಿಗ್ಗಾಂವ, ಮಲ್ಲಿಕಾರ್ಜುನ ನಂದೂರ, ಭೀಮಾಶಂಕರ ತೊನಸಳ್ಳಿ, ಗಿರಿಮಲ್ಲಪ್ಪ ಭೂಸನ, ಖಲೀಲಮಿಯ್ಯ, ಮೈಬುಪಟೇಲ್, ಪಿಡಿಒ ಕಾವೇರಿ ರಾಠೋಡ, ಗಂಗಮ್ಮ ನಾಲವಾರ, ಹೀರಾಬಾಯಿ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷರಾದ ಅಣ್ಣಪ್ಪ ಬುಟ್ಟಿ, ಸಿದ್ರಾಮಯ್ಯಸ್ವಾಮಿ, ಜಯರಾಜ ಮುದಿರಾಜ, ತುಕಾರಾಮ ಪಾಲ್ಗೊಂಡಿದ್ದರು.