ಲೇಖಕ ಡಾ. ಅಬ್ದುಲ್ ಕರೀಂಗೆ ಸನ್ಮಾನ
ಶಹಾಪುರ: ಇತ್ತೀಚೆಗೆ ಸಗರನಾಡ ಸಂಸ್ಕೃತ ಸಮೀಕ್ಷೆ ಕೃತಿ ಬಿಡುಗಡೆಗೊಳಿಸಿದ ಪ್ರಯುಕ್ತ ಲೇಖಕರಾದ ಡಾ. ಅಬ್ದುಲ್ ಕರೀಮ್ ಕನ್ಯೆಕೊಳ್ಳೂರವರಿಗೆ ಸನ್ಮಾನ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಭೀಮರಾಯನಗುಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಗುರುಲಿಂಗಪ್ಪ ಮಿಣಜಿಗಿ ವಹಿಸಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ರೇಖು ಚವ್ಹಾಣ ಹಾಗೂ ಸುರಪುರದ ಇಕ್ಬಾಲ ಮುಖ್ಯ ಅತಿಥಿಗಳಾಗಿದ್ದರು.
ಸಗರನಾಡು ಸಂಸ್ಕೃತಿ ಸಮೀಕ್ಷೆ ಗ್ರಂಥ ಕರ್ತ ಡಾ. ಅಬ್ದುಲ್ಕರೀಮ್ಗೆ ಸನ್ಮಾನಿಸಿ ಇಖಬಾಲ ರಾಯಿ ಮಾತನಾಡಿದರು. ಸುರಪುರದವರಾದ ಜಾಕೀರ ಹುಸೇನ ಅಜೀಮ ಫೌಂಡೆಸನ್ ವಲಯಾಧಿಕಾರಿಗಳಾದ ಅಜೀಂ ಫರೀದ ಸಾಬ ಮತ್ತು ಅಬ್ದುಲ ಖಹಿಂ ಸಗರಿ ಇವರೆಲ್ಲರು ಸನ್ಮಾನಿಸಿದರು. ಎಂ.ಎಸ್.ಬಿರದಾರ, ರಾಮಚಂದ್ರ ಗುಂಡೇಕರ, ದಯಾನಂದ, ಮಂಜುನಾಥ, ಡಿ.ಎಸ್. ದೇವೂರು ರಾಜಕುಮಾರ.ಸಿ.ಕೆ ಉಪಸ್ಥಿತರಿದ್ದರು. ಡಾ. ರವೀಂದ್ರನಾಥ ನಿರ್ವಹಣೆ ಮಾಡಿದರು. ಹಾಲಮಂಡಗೆ ವಂದಿಸಿದರು.