ಶಿಕ್ಷಕಿಗೆ ಬೀಳ್ಕೊಡುಗೆ
ಶಹಾಪುರ: ಒಂದು ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಶಿಕ್ಷಕರ ಸ್ವಯಂ ಪ್ರಯತ್ನ ಸಾರ್ಥಕವಾಗಿದೆ. ಈ ದಿಸೆಯಲ್ಲಿ ಶಿಕ್ಷಕಿ ಎಚ್.ಎನ್. ಪಿಂಜಾರ ಅವರ ಕಾರ್ಯದಕ್ಷತೆ ಸಿ.ಬಿ. ಶಾಲೆಯ ಉನ್ನತಿಗೆ ಪ್ರೇರಣೆ ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪ ಗೌಡ ದರ್ಶನಾಪುರ ತಿಳಿಸಿದರು.
ಪಟ್ಟಣದ ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ನಾಲ್ಕು ದಶಕಗಳಿಂದ ಎಚ್.ಎನ್. ಪಿಂಜಾರ ದೈಹಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಶಾಲಾ ಆವರಣದಲ್ಲಿ ಆಯೋಜಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿವೃತ್ತ ಮುಖ್ಯಗುರು ಗುರುಬಸ್ಸಯ್ಯ ಗದ್ದುಗೆ ಮಾತನಾಡಿ, ದೈಹಿಕ ಶಿಕ್ಷಕಿ ಕಾರ್ಯ ನಿರ್ವಹಿಸಿದ ಎಚ್.ಎನ್. ಪಿಂಜಾರ ಕಾರ್ಯ ಶ್ಲಾಘಿಸಿದರು.
ಸಂಸ್ಥೆ ಹಾಗೂ ವಿದ್ಯಾರ್ಥಿಗಳ ವತಿಯಿಂದ ಎಚ್.ಎನ್. ಪಿಂಜಾರ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಎಂ.ಬಿ. ನಾಡಗೌಡ, ಮಹಿಮುನಾ ಶಿಕ್ಷಕಿ, ಶಿವಬಸಪ್ಪ, ಎಂ.ಎಂ. ಹುಂಡೇಕಾರ, ಪಿ.ಯು. ಕಾಲೇಜು ಪ್ರಾಚಾರ್ಯ ಸಿದ್ಧಣ್ಣ, ನಿವೃತ್ತ ಮುಖ್ಯಗುರು ಪಾ.ವಿ. ಅರಿಕೇರಿ, ಉಪಸ್ಥಿತರಿದ್ದರು. ಶಿಕ್ಷಕ ಮಹ್ಮದ್ ಹುಸೇನ್ ಆಸ್ಕರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಾಲಾ ವಿದ್ಯಾರ್ಥಿನಿ ರೇಣುಕಾ ಪ್ರಾರ್ಥಿಸಿದರು. ಶಿಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು.