ಸರ್ಜಾಪುರ; ಅಂಬೇಡ್ಕರ್ ಭವನಕ್ಕೆ ಅಡಿಗಲ್ಲು
ಲಿಂಗಸ್ಗೂರು: ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅಡಿಗಲ್ಲು ನೆರವೇರಿಸಿದರು.
ಸಮಾಜ ಕಲ್ಯಾಣ ಇಲಾಖೆಯ 2012-13ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಕ್ರೂಢೀಕೃತ ಅನುದಾನದಲ್ಲಿ 10 ಲಕ್ಷ ವೆಚ್ಚದ ಡಾ. ಅಂಬೇಡ್ಕರ್ ಭವನ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಮಖಂಡಿ ಸಹಜಾನಂದ ಶ್ರೀ, ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ. ವಸಂತ ಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷೆ ಕಸ್ತೂರಮ್ಮ, ಜಿಪಂ ಸದಸ್ಯೆಯರಾದ ದುರುಗಮ್ಮ ಗುಂಡಪ್ಪ ನಾಯಕ, ಲಲಿತ ಅಯ್ಯಣ್ಣ, ಸಹಾಯಕ ಆಯುಕ್ತ ಟಿ. ಯೋಗೇಶ್, ಡಿವೈಎಸ್ಪಿ ಅನಿತಾ ಹದ್ದಣ್ಣವರ್, ತಾಪಂ ಇಒ ಶರಣಬಸಪ್ಪ, ಜಿಪಂ ಅಧಿಕಾರಿ ವೀರಭದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್, ಮುಖಂಡರಾದ ಬಸವಂತರಾಯ ಕುರಿ, ಡಿ.ಎಸ್. ಹೂಲಗೇರಿ, ಸೋಮಶೇಖರ ಐದನಾಳ, ಹನುಮಂತಪ್ಪ ತೊಗರಿ, ಸಂಗಣ್ಣ ದೇಸಾಯಿ, ಗುಂಡಪ್ಪ ನಾಯಕ, ಶಿವನಗೌಡ ಪಾಟೀಲ್, ಅಯ್ಯಣ್ಣ ವಕೀಲರು, ಎಂ.ಡಿ. ರಫೀ ಇದ್ದರು.