ಕಲ್ಯಾಣನಾಡು ಮಾಸ ಪತ್ರಿಕೆ ಲೋಕಾರ್ಪಣೆ
ಗುಲ್ಬರ್ಗ: ಗುಲ್ಬರ್ಗದ ಹಿರಿಯ ಪತ್ರಕರ್ತ ಮಾಣಿಕರಾವ ಪಸಾರ್ ಇದೀಗ ತಮ್ಮದೇ ಸಂಪದಾಕತ್ವದ ಕಲ್ಯಾಣನಾಡು ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತರೆ ವಿಷಯಗಳ ಮೇಲೆ ಹೊಸಬೆಳಕು ಚಲ್ಲುವ ಉದ್ದೇಶದೊಂದಿಗೆ ಆರಂಭಿಸಿರುವ ಕಲ್ಯಾಣನಾಡು ಮಾಸ ಪತ್ರಿಕೆ ಭಾನುವಾರ ಇಲ್ಲಿನ ಕನ್ನಡ ಭವನದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಹೋರಾಟಗಾರ ವೈಜನಾಥ ಪಾಟೀಲ್ ಪತ್ರಿಕೆಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಸುಲಫಲ ಮಠದ ಮಹಾಂತ ಶ್ರೀ ಸಾನ್ನಿದ್ಯ ವಹಿಸಿದ್ದರು. ರಟಕಲ್‌ನ ವಿರುಪಾಕ್ಷ ಶ್ರೀ ಆಶೀರ್ವಚನ ನೀಡಿದರು. ಹೋರಾಟಗಾರ ಎಸ್ಕೆ ಕಾಂತಾ, ಜೈಕರವೇ ಅಧ್ಯಕ್ಷ ಅರುಣ ಪಾಟೀಲ್, ಹೈ-ಕ ಜನಪರ ಸಂಘರ್ಷ ಸಮಿತಿಯ ಲಕ್ಷಣ ದಸ್ತಿ, ಹಿರಿಯ ಪತ್ರಕರ್ತ ಪಿಎಂ ಮಣ್ಣೂರ, ವಿಜಯ ತೇಗಲತಿಪ್ಪಿ ಸೇರಿದಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕನ್ನಡಪರ ಸಂಘಟನೆಯ ಅನೇಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾಣಿಕರಾವ ಪಸಾರ್ ಅವರ ಪ್ರಯತ್ನಕ್ಕೆ ಹೈ-ಕ ಜನತೆ ಬೆಂಬಲವಾಗಿ ನಿಲ್ಲುವಂತಾಗಲಿ ಎಂದು ಸೇರಿದ್ದ ಎಲ್ಲರು ಪತ್ರಿಕೆಗೆ ಶುಭ ಕೋರಿದರು.
ಇನ್ಫೋಸಿಸ್‌ನ ವಾಸುದೇವ ದೇಶಪಾಂಡೆ, ಸಿದ್ದಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೆಕ್, ಸೃಜನಶೀವ ಕವಿ ಬಸವರಾಜ ನಂದೂರ್ ಅವರನ್ನು ಪತ್ರಿಕೆ ಬಿಡುಗಡೆ ಅಂಗವಾಗಿ ಸಾಧನೆಗೆ ಸನ್ಮಾನಿಸಲಾಯಿತು. ಮಾಣಿಕರಾವ ಪಸಾರ್ ಮಾತನಾಡಿದರು.