ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕುವೆಂಪು ಸಾಹಿತ್ಯ ಹೊಸತನ'

Lingaraj Badiger
Updated On : 6 Jan 2014, 11:19 am

ಹುಣಸಗಿ: ಓದು ನಮ್ಮಲ್ಲಿನ ಸ್ವಯಂಭಾವ ಹೆಚ್ಚಿಸಿಕೊಳ್ಳುವುದು ಅಲ್ಲ, ಬದಲಿಗೆ ನಮ್ಮಲ್ಲಿ ನಾವು ಪರಿವರ್ತನೆ ಕಂಡುಕೊಳ್ಳಲು ಎಂದು ತಿಳಿದಾಗ ಮಾತ್ರ ನಾವು ಇನ್ನೂ ಸಮಾಜದಲ್ಲಿ ಮತ್ತು ಸಾಹಿತಿಕವಾಗಿ ಹೆಚ್ಚು ಪರಿಪಕ್ವತೆ ಕಾಣಲು ಸಾಧ್ಯ ಎಂದು ಸಾಹಿತಿ ಚಂದ್ರೇಗೌಡ ಕುಲಕರ್ಣಿ ಹೇಳಿದರು.
  ಹುಣಸಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಕುವೆಂಪು ಜೀವನ ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಅಧ್ಯಕ್ಷತೆಯನ್ನು ಪದವಿ ಕಾಲೇಜು ಪ್ರಾಚಾರ್ಯ ಐ.ಬಿ. ಮರೋಳ ವಹಿಸಿ ಮಾತನಾಡಿದರು. ವಿಶ್ವಚೇತನ ಬಳಗದ ಅಧ್ಯಕ್ಷ ಶಿವಕುಮಾರ ಬಂಡೋಳಿ ಪ್ರಾಸ್ತಾವಿಕ ಮಾತನಾಡಿದರು. ಬಸಣ್ಣ ಗೊಡ್ರಿ, ಆರ್.ಎಲ್. ಸುಣಗಾರ, ಷಣ್ಮುಖಪ್ಪ ಪೊಲೀಸ್ ಪಾಟೀಲ, ರೇವಣ್ಣ ಬ್ಯಾಕೋಡ, ಡಾ. ಎಂ.ಎಸ್. ಹುದ್ದಾರ್. ಮಲ್ಲಿಕಾರ್ಜುನ್ ಸ್ಥವರಮಠ, ಸಂಗನಗೌಡ ಪಾಟೀಲ, ಬಸವರಾಜ ವಂದಲಿ, ಹನೀಫ್ ಬಣ್ಣೂರ್, ನಿಂಗನಗೌಡ ಪಾಟೀಲ, ನಾಗಪ್ಪ ಅಡಿಕ್ಯಾಳ, ಸಿದ್ದಣ್ಣ ಬಳಿ ಸೇರಿದಂತೆ ಇತರರು ಇದ್ದರು. ಬಸಯ್ಯ ಮಠ ಸ್ವಾಗತಿಸಿದರು. ಮಶಾಕ ಯಾಳಗಿ ವಂದಿಸಿದರು. ಶಿವಾನಂದ ತೋಟದ್ ಕಾರ್ಯಕ್ರಮ ನಿರೂಪಿಸಿದರು.
--
ಯೋಜನೆಗಳ ಸಫಲತೆಗೆ ಅರಿವು ಅಗತ್ಯ
ಚಿಂಚೋಳಿ: ರಾಜ್ಯದಲ್ಲಿಯೇ ಚಿಂಚೋಳಿ ತಾಲೂಕ ಅತಿ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಹೊರಬರಬೇಕಾದರೆ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದು ಜನಪ್ರತಿನಿಧಿ ಮತ್ತು ಅಧಿಕಾರಿಗಳ ಕೆಲಸ ಎಂದು ಶಾಸಕ ಡಾ. ಉಮೇಶ ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದರು.
  ಪಟ್ಟಣದ ಚಂದಾಪುರ ನಗರದ ಸಿ.ಬಿ. ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ವಾರ್ತಾಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಗುಲ್ಬರ್ಗ, ತಾಲೂಕ ಪಂಚಾಯ್ತಿ ಚಿಂಚೋಳಿ, ಪಪಂ ಚಿಂಚೋಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಗುಲ್ಬರ್ಗ ವಿಭಾಗ ಮಟ್ಟದ ಬಹು ಮಾಧ್ಯಮ ಪ್ರಚಾರಾಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡ್ದರು.
  ಜಿಪಂ ಅಧ್ಯಕ್ಷ ರಮೇಶ ಮರಗೋಳ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಪಪಂ ಅಧ್ಯಕ್ಷೆ ಇಂದುಮತಿ ಶಿವನಾಗಯ್ಯ ಸ್ವಾಮಿ ವಹಿಸಿದರು. ಜಿಪಂ ಉಪಾಧ್ಯಕ್ಷೆ ಅನೀತಾ ವಳಕೇರಿ, ಪಪಂ ಉಪಾಧ್ಯಕ್ಷ ಶಾಮರಾವ ಕೊರವಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ ಠಾಕೂರ, ಕೆ.ಎಂ. ಹಾಶ್ಮಿ, ಬಸವರಾಜ ಮಲಿ, ವಿಠಲ ಚವ್ಹಾಣ, ರಾಮಶೆಟ್ಟಿ ಪವಾರ, ರಾಜೂ ಪವಾರ, ಪ್ರಾಚಾರ್ಯ ಜಿ.ಜಿ. ಗೌಡಪ್ಪಗೋಳ, ತಹಸೀಲ್ದಾರ್ ಮೋಹನ ಜೋಶಿ, ಸಿಡಿಪಿಒ ಮಹ್ಮದ ರಫೀ ಶಕಾಳೆ ಉಪಸ್ಥಿತರಿದ್ದರು. ವಾರ್ತಾಇಲಾಖೆ ಉಪನಿರ್ದೇಶಕ ಬಸವರಾಜ ಕಂಬಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರವಿರಾಜ್ ನಿರೂಪಿಸಿ, ಡಾ. ರಾಜಕುಮಾರ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement