ಕ್ಷೇಮಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಖರ್ಗೆ ಭರವಸೆ
ಆಳಂದ: ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ವ ಪಡೆದ ತಾಲೂಕಿನ ನರೋಣಾ ಕ್ಷೇಮಲಿಂಗೇಶ್ವರ ಸುಕ್ಷೇತ್ರವನ್ನು ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆಯ ಅನುದಾನ ಒದಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಸಂಸದ ಖರ್ಗೆ ಭರವಸೆ ನೀಡದರು.
ತಾಲೂಕಿನ ನರೋಣಾ ಗ್ರಾಮದ ಸಮೀಪದಲ್ಲಿರುವ ಕ್ಷೇಮಲಿಂಗೇಶ್ವರ ದೇವಸ್ಥಾನದ ದ್ವಾರಬಾಗಿಲು ನಿರ್ಮಿಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
17ಲಕ್ಷ ಸಾಲದು: ಮೊದಲು ಹಂತವಾಗಿ ಮುಜರಾಯಿ ಇಲಾಖೆಯ ಮೂಲಕ 15 ಲಕ್ಷ ಒದಗಿಸಲು ಪ್ರಯತ್ನಿಸಲಾಗುವುದು. ಸಮಗ್ರ ಕ್ಷೇತ್ರದ ಜಿರ್ಣೋದ್ಧಾರ ಕೈಗೊಳ್ಳಲು ದೇವಸ್ಥಾನ ಕಮಿಟಿ ನಿರ್ಣಯಿಸಿದ 50 ಲಕ್ಷ ವೆಚ್ಚದ ಯೋಜನೆಯಲ್ಲಿ ಈಗಾಗಲೇ ಭಕ್ತಾದಿಗಳಿಂದ ಮತ್ತು ಇತರ ಮೂಲದಿಂದ ಸಂಗ್ರಹಿಸಿದ 17ಲಕ್ಷ ಸಾಲದು. ಮುಜರಾಯಿ ಇಲಾಖೆಯಿಂದ ಮೊದಲ ಹಂತದಲ್ಲಿ 15 ಲಕ್ಷ ನೀಡಿ ಬಳಿಕ ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಅನುದಾನ ದೊರೆಕಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು, ಅನೇಕರು ಚುನಾವಣೆಗೆ ನಿಂತು ಗೆದ್ದ ಮೇಲೆ ಕ್ಷೇತ್ರದ ಕಡೆ ತಿರುಗಿಯು ನೋಡುವುದಿಲ್ಲ. ಆದರೆ ನನ್ನ ಜವಾಬ್ದಾರಿ ಹಾಗೂ ನಿಮ್ಮ ಆಶೀರ್ವಾದ ಫಲವಾಗಿ ಕೊಟ್ಟ ಮಾತಿನಂತೆ ನಡೆದು ಹೈ.ಕ. ಪ್ರದೇಶ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
ನಾನು ನಿಷ್ಠುರವಾಗಿ ಮಾತನಾಡುತ್ತೇನೆ, ಹೀಗಾಗಿ ಅನೇಕರಿಗೆ ಇರಿಸುಮುರಿಸನ್ನುಂಟು ಮಾಡುತ್ತದೆ. ಇದು ನನ್ನ ಸ್ವಭಾವವೇ ಹೀಗಿದೆ. 45 ವರ್ಷದಿಂದ ಬರಲಾಗಿದೆ ಸಾರ್ವಜನಿಕರು ಅನ್ಯತಾ ಭಾವಿಸಬಾರದು. ನಾನು ಸತ್ಯಕ್ಕಾಗಿ ನಡೆದುಕೊಳ್ಳುತ್ತೇನೆ. ಬಸವಣ್ಣವನರು ಹೇಳಿದಂತೆ ಕಾಯಕವೇ ಕೈಲಾಸ ಎಂದಂತೆ ಅಭಿವೃದ್ಧಿ ಕೆಲಸ ಮಾಡುವವರಿಗೆ ಸಹಕರಿಸಬೇಕು ಎಂದರು.
ದಾನಿಗಳ ಕೊರತೆ: ಹಿಂದೆ ಎಲ್ಲಾ ಕಡೆ ಸರ್ಕಾರಿ ಕಟ್ಟಡಗಳಿಗೆ ಸಹಕರಿಸಲು ಮತ್ತು ದಾನಿಗಳಾಗಿ ಮುಂದೆ ಬಂದು ಜಾಗಕೊಡುತ್ತಿದ್ದರು. ಈಗ ಹಣ ಕೇಳುತ್ತಾರೆ ಇದರಿಂದ ಅಭಿವೃದ್ಧಿಗೆ ಮಾರಕವಾಗುತ್ತದೆ. ದೇವರಿಗೆ ಕುರಿ, ಹರಕೆ ಬದಲು ದೇವಸ್ಥಾನದಲ್ಲಿ ನಡೆಯುವ ಉತ್ತಮ ಕೆಲಸಕ್ಕೆ ಎಲ್ಲರು ಸಹಕರಿಸಬೇಕು. ಬಿಜಾಪುರ, ಧಾರವಾಡ ಬೆಳಗಾಂವ ಇನ್ನಿತರ ಕಡೆ ಸಹಕಾರ ಮನೋಭಾವದಿಂದ ಶಿಕ್ಷಣ ಮತ್ತಿತರ ಹೆಚ್ಚಿನ ಪ್ರಗತಿಕಂಡಂತೆ ಇಲ್ಲೂ ನಡೆಯಬೇಕೆಂದ ಖರ್ಗೆ ಸಲಹೆ ನೀಡಿದರು.
ಗಣ್ಯರಿಗೆ ಸಚಿವರಿಗೆ ಸನ್ಮಾನ: ಕಲಬುರ್ಗ ಗ್ರಾಮೀಣ ಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ನೆರವು ಒದಗಿಸಲಾಗುವುದು ಮತ್ತು ಜನರ ತಮ್ಮ ಸಮಸ್ಯೆಗಳಿಗೆ ನೇರವಾಗಿ ಸಂಪರ್ಕಿಸಿ ಕೆಲಸವನ್ನು ಮಾಡಿಕೊಳ್ಳಬೇಕು ಎಂದರು. ಶಾಸಕ ಬಿ.ಆರ್. ಪಾಟೀಲ ಸೇರಿ ಗಣ್ಯರಿಗೆ ಸಚಿವರಿಗೆ ಸನ್ಮಾನಿಸಲಾಯಿತು.
ನರೋಣಾ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀ, ವಿಧಾನ ಪರಿಷತ್ ಸದಸ್ಯ ಅಲಂ ಪ್ರಭು ಪಾಟೀಲ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು.
ತಹಸೀಲ್ದಾರ್ ಪರಮೇಶ್ವರ ಕೆ.ಸ್ವಾಮಿ, ಬಬಲಾದ, ಗುರುಪಾದಲಿಂಗ ಶ್ರೀ, ಚನ್ನಮಲ್ಲದೇವರು, ಜಿಪಂ ಸದಸ್ಯೆ ಮಂಗಲಾ ನರೋಣಿ, ಮಾಜಿ ಸದಸ್ಯ ಶಿವರಾಜ ಭಾಸಗಿ, ಜಗನಾಥ ಶೇಗಜಿ, ಗುರುಶರಣ ಪಾಟೀಲ ಕೋರಳ್ಳಿ, ಡಿ.ಜಿ. ಸಾಗರ, ವಿಠ್ಠಲರಾವ್ ಪಾಟೀಲ, ನ್ಯಾಯವಾದಿ ಬಾಬುರಾವ ಮಂಗಾಣೆ, ತಾಪಂ ಸದಸ್ಯ ಮಲ್ಲಿಕಾರ್ಜುನ ಮೊದಲಿ, ಶಿವುಪುತ್ರಪ್ಪಾ ಕೊಟ್ಟರಗಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ ಪಾಟೀಲ ಸ್ವಂತ, ಶರಣು ಭಸನೂರ, ಮೋಹನಗೌಡ ಪಾಟೀಲ, ಲಕ್ಷ್ಮಿಂಪುತ್ರ ಸಂಗೊಳಿ ಅನೇಕರು ಭಾಗವಹಿಸಿದ್ದರು. ಗ್ರಾಮದ ಚಂದ್ರಕಾಂತ ಸಂಗೊಳಗಿ ಸ್ವಾಗತಿಸಿದರು. ಬಾಬು ವಾಲಿ ನಿರೂಪಿಸಿದರು.