'ಪ್ರತಿಯೊಬ್ಬರೂ ವಿದ್ಯಾವಂತರಾಗಲಿ'
ಕೆಂಭಾವಿ: ದೇಶದ ಪ್ರತಿಯೊಂದು ಮಗು ಶಿಕ್ಷಣ ಕಲಿತು ಮುಂದೆ ಬರಬೇಕು, ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿದ್ದು ಅದರ ಸದುಪಯೋಗ ಪಡೆದು ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು ಎಂದು ಅಜೀಂ ಪ್ರೇಮ್‌ಜೀ ಫೌಂಡೇಷನ್ ಮಾರ್ಗದರ್ಶಕ ಕೃಷ್ಣ ಬಿಜಾಸ್ಪೂರ ಹೇಳಿದರು.
ಸಮೀಪದ ಕರಡಕಲ್ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜಸ್ಥಾನ ತಂಡದೊಂದಿಗೆ ಭಾನುವಾರ ನಡೆದ ಶಿಕ್ಷಣ ಏಳಿಗೆಗಾಗಿ ಸಮುದಾಯದ ಜೊತೆ ಸಂಪರ್ಕ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಪಂ ಪಿಡಿಒ, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದಲಿ ರಾಜಸ್ಥಾನ ತಂಡದ ಸದಸ್ಯರಾದ ಜ್ಯೋತಿ ಶರ್ಮ, ಅರುಣಾ ಶರ್ಮ, ವೀರೇಂದ್ರ, ಆಸೀಮಾ ಗುಪ್ತಾ, ಗ್ರಾಪಂ ಪಿಡಿಒ ಜಯಾಚಾರ್ಯ, ಎಸ್‌ಡಿಎಂಸಿ ಸದಸ್ಯರಾದ ಶಂಕರಗೌಡ ಐನಾಪುರ, ಬಂದೇನವಾಜ, ನಿಂಗಪ್ಪ, ಶಾಲೆಯ ಮುಖ್ಯಗುರು ಶ್ರೀಶೈಲ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಹಣಮಂತ್ರಾಯ ಹಾಗೂ ಪದಾಧಿಕಾರಿಗಳು ಇದ್ದರು.