ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡಾ. ಮಾಲಕರೆಡ್ಡಿಗೆ ಸಚಿವ ಸ್ಥಾನ ನೀಡಲು ಆಗ್ರಹ

Lingaraj Badiger
Updated On : 7 Jan 2014, 12:14 pm

ಶಹಾಪುರ: ಆಡಳಿತದಲ್ಲಿ ಅಪಾರ ಅನುಭವ, ಬುದ್ಧಿಜೀವಿ, ಮತ್ತು ಹಿರಿಯರಾದ ಯಾದಗಿರಿ ಮತಕ್ಷೇತ್ರದ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ದೋರನಹಳ್ಳಿ ಗ್ರಾಮದ ಮುಖಂಡರು ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮುಖಂಡ ಶಂಕ್ರಣ್ಣ ಶಾಣ್ಯಾನೋರ್, ಭೀಮಾಶಂಕರ ಅಣಬಿ ಡಾ. ಮಾಲಕರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಆಡಳಿತ ಅನುಭವವು ರಾಜ್ಯದ ಜನತೆಗೆ ಸದುಪಯೋಗವಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಕಾಳಜಿ ವಹಿಸಿ ಹೈ-ಕ.ದ ಭವಿಷ್ಯದ ಹಿತದೃಷ್ಟಿಯಿಂದ ಸಚಿವ ಸ್ಥಾನದ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಸಿದ್ದು ವಕೀಲರು, ಹೈಯಾಳಪ್ಪ ಗುಂಟ್ನೂರ, ಶ್ರೀನಾಥ ಗಣೇರ, ಹಳ್ಳೆಪ್ಪ ಹುಡೇದ, ಹೈಯಾಳಪ್ಪ ಹುಡೇದ, ಹೈಯಾಳಪ್ಪ ದೊಡ್ಮನಿ, ಮಹಿಬೂಬ ಪಟೇಲ್, ನಾರಾಯಣ ಸುಗಂಧಿ, ನಾಗಪ್ಪ ಟೊಣ್ಣೂರ, ಭೀಮರಾಯ ಮನವಿ ಮಾಡಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement