ಪ್ರಚೋದನಕಾರಿ ಭಾಷಣ: ತೊಗಾಡಿಯಾ ಖುಲಾಸೆ
ಗುಲ್ಬರ್ಗ/ಜೇವರ್ಗಿ: 2005ರಲ್ಲಿ ದಾಖಲಾಗಿದ್ದ ಪ್ರಚೋದನಾಕಾರಿ ಭಾಷಣ ಪ್ರಕರಣದಲ್ಲಿ ಡಾ.ಪ್ರವೀಣ್ಭಾಯ್ ತೊಗಾಡಿಯ ಅವರು ಖುಲಾಸೆಗೊಂಡಿದ್ದಾರೆ. 2005ರಲ್ಲಿ ಜೇವರ್ಗಿ ಪಟ್ಟಣದ ತಾಲೂಕು ಕ್ರಿಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಡಾ.ಪ್ರವೀಣ್ ತೊಗಾಡಿಯಾ ಅವರು ಪ್ರಚೋದನಾಕಾರಿ ಭಾಷಣಾ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಜೆಎಂಎಫ್ ಕೋರ್ಟ್ಗೆ ತೊಗಾಡಿಯಾ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ತೊಗಾಡಿಯಾ ಅವರನ್ನು ಪ್ರಚೋದನಾಕಾರಿ ಭಾಷಣ ಪ್ರಕರಣದಿಂದ ಖುಲಾಸೆ ಗೊಳಿಸಿದರು.