ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಶಿಕ್ಷಣದೊಂದಿಗೆ ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳಿ'

Lingaraj Badiger
Updated On : 7 Jan 2014, 12:14 pm

ಹುಣಸಗಿ: ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಯಶಸ್ವಿ ಜೀವನ ನಡೆಸಬೇಕೆಂದು ಇಲ್ಲಿನ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಸಿ.ಬಿ. ಬಾಗೋಡಿ ಹೇಳಿದರು.  ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ರೀಡಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯದನ್ವಯ ಉಪನ್ಯಾಸ ನೀಡಿ, ಹಿಂದೆ ಗಾಂಧೀಜಿ ಸತ್ಯ ಹರಿಶ್ಚಂದ್ರ ಮತ್ತು ಶ್ರವಣಕುಮಾರನ ಪಿತೃ ಭಕ್ತಿ ಎಂಬ ನಾಟಕಗಳನ್ನು ನೋಡಿ ತಮ್ಮ ಜೀವನವನ್ನೆ ಪರಿವರ್ತಿಸಿಕೊಂಡಿದ್ದರು ಎಂದು ಹೇಳಿದರು.
ಅಭಿವೃದ್ಧಿ ಅಧಿಕಾರಿ ದಶವಂತ ಬಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು ದೂರದರ್ಶನಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಿಗೆ ಅಂಟಿಕೊಂಡಿದ್ದು, ಅದರಿಂದಾಚೆ ಬಂದು ಅಭ್ಯಾಸದಲ್ಲಿ ನಿರತರಾಗಬೇಕೆಂದರು. ಮುಖ್ಯ ಶಿಕ್ಷಕಿ ಅಮೃತಬಾಯಿ ಜಹಾಗೀರದಾರ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ಚಿಂಚೋಳಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಉದ್ಯಮಿ ವಿದ್ಯಾಸಾಗರ ಶೆಟ್ಟಿ 10 ಸಾವಿರ ರೂಗಳ ದತ್ತಿ ನಿಧಿಯನ್ನು ಶಾಲೆಗೆ ದೇಣಿಗೆ ನೀಡಿದರು. ಮತ್ತು ಸಿ.ಬಿ. ಬಾಗೋಡಿ ಪ್ರಿಂಟರ್‌ನ್ನು ದೇಣಿಗೆಯನ್ನಾಗಿ ನೀಡಿದರು.
ಚನ್ನಪ್ಪ ಬಾಗೇವಾಡಿ, ರಾಮರಾವ ಕುಲಕರ್ಣಿ, ಸೋಮನಗೌಡ ಬಳವಾಟ, ವಿಜಯಲಕ್ಷ್ಮೀ ಕುಂಬಾರ, ಲಲತಾ ಮಠ, ಸುಮಂಗಲಾ ನೂಲಿ ಸೇರಿದಂತೆ ಇತರರು ಇದ್ದರು. ಮಶಾಕ ಯಾಳಗಿ ಸ್ವಾಗತಿಸಿದರು. ನಾಗನಗೌಡ ಪಾಟೀಲ್ ನಿರೂಪಿಸಿದರು. ಶ್ರೀಶೈಲ್ ಹುಗಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement