ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪುರಸಭೆ ಅಧಿಕಾರಿಗಳ ವಿರುದ್ಧ ಸೇನೆ ದೂರು

Lingaraj Badiger
Updated On : 8 Jan 2014, 12:10 pm

ಸುರಪುರ: ಇಲ್ಲಿಯ ಪುರಸಭೆ ಕಾರ್ಯಾಲಯದ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿ ಕನ್ನಡ ಸೇನೆ ಜಿಲ್ಲಾ ಮತ್ತು ತಾಲೂಕು ಘಟಕಗಳು ನಗರಸಭೆ ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿದವು.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನಿತ್ಯವು ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಣ ನೀಡುವಲ್ಲಿ ವಿಳಂಬ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ವಸತಿ ವಿಭಾಗಕ್ಕೆ ಖಾಯಂ ಅಧಿಕಾರಿ ನೇಮಕ ಮಾಡಿಲ್ಲ. ಯೋಜನೆಯ ಕಡತಗಳು 3- 4 ಸಿಬ್ಬಂದಿ ಹತ್ತಿರವಿದ್ದು, ಫಲಾನುಭವಿಗಳು ಕೇಳಿದರೆ ಪರಸ್ಪರ ಒಬ್ಬರ ಮೇಲೆ ಮತ್ತೊಬ್ಬರು ಹೆಸರು ಸೂಚಿಸಿ ನಾಗರಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ವಸತಿ ವಿಭಾಗಕ್ಕೆ ತುರ್ತಾಗಿ ಕಾಯಂ ಅಧಿಕಾರಿ ನೇಮಿಸಬೇಕು. ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ವಿಳಂಬವಾಗದಂತೆ ತ್ವರಿತ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಸಂಘಟನೆಯು ಬೀಗಮುದ್ರೆ ಹಾಕುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಪಿಡಿಒ ಬಲಭೀಮ ಕಾಂಬ್ಳೆಗೆ ಮನವಿ ಪತ್ರ ಸಲ್ಲಿಸಲಾಯಿತು. ಸೇನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ, ತಾಲೂಕು ಅಧ್ಯಕ್ಷ ಮರೆಪ್ಪ ಹವಲ್ದಾರ, ತಾಲೂಕು ಕಾರ್ಯಧ್ಯಕ್ಷ ದೇವಿಂದ್ರ ಬಿ.ಕೆ, ತಿರುಪತಿ, ಗೌಡಪ್ಪ ಡೊಣ್ಣಿಗೇರಾ, ರಾಮು ಡೊಣ್ಣಿಗೇರಾ, ಹುಸನಪ್ಪ ಜೀವಣಗಿ, ಶಿವುಕುಮಾರ ಕಟ್ಟಿಮನಿ, ಬಾಲಾಜಿ, ಪರಶುರಾಮ ಮೇದಾಗಲ್ಲಿ ಇನ್ನಿತರರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement