ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರತಿಭೆಗೆ ಕ್ರೀಡಾಮೇಳ ಮೇಲ್ಪಂಕ್ತಿಯಾಗಲಿ

Lingaraj Badiger
Updated On : 8 Jan 2014, 12:10 pm

ಶಹಾಪುರ: ಸಗರನಾಡಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತಾಗಲು ಕ್ರೀಡಾಮೇಳ ಸಾರ್ಥಕವಾಗಲಿ ಎಂದು ಗುಲ್ಬಾರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಪ್ರಮುಖರಾದ ಎಂ.ಎಸ್. ಪಾಸೋಡಿ ತಿಳಿಸಿದರು.
ಪಟ್ಟಣದ ಸಿಪಿಎಸ್ ಮೈದಾನದಲ್ಲಿ ಆಯೋಜಿಸಿದ್ದ ದೈಹಿಕ ಶಿಕ್ಷಣದ ಶಿಕ್ಷಕರ ಹಾಗೂ ಮಕ್ಕಳ ಕ್ರೀಡಾ ಮೇಳದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಆರೋಗ್ಯಕರ ಶರೀರ ಇದ್ದಕಡೆ ಆರೋಗ್ಯ ಮನಸ್ಸು ಇರುತ್ತದೆ. ದೈಹಿಕ ಶಿಕ್ಷಣ ಮಾನಸಿಕ, ಸಾಮಾಜಿಕ ಸ್ವಾಸ್ಥ್ಯ ಪಡೆದುಕೊಳ್ಳುವುದೇ ಆಗಿದೆ. ಹೊಸತ ಜೋಡಿಸುವ ಕಾರ್ಯ ಇಲ್ಲಿನ ಮೇಳದಿಂದ ನಡೆಯಲಿ. ಬರುವ ವರ್ಷ ಉತ್ತಮ ಪ್ರದರ್ಶನ ನೀಡುವ ಕ್ರೀಡೆಗಳು ಪ್ರದರ್ಶನವಾಗಲಿ  ಎಂದು ತಿಳಿಸಿದರು.
ಒಂದಡೆ ಸಿಗುವಂಥ ಕಾರ್ಯ: ಪ್ರಾಸ್ತಾವಿಕವಾಗಿ ದೈಹಿಕ ಶಿಕ್ಷಕ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಸುಧಾಕರ ಗುಡಿ ಮಾತನಾಡಿ, ತಾಲೂಕಾ ಮಟ್ಟದಲ್ಲಿ ವಿವಿಧ ಕಾರ್ಯಗಾರಗಳು, ಮೇಳಗಳು ಆಯೋಜಿತವಾಗುತ್ತವೆ. ಆದರೆ ಕ್ರೀಡಾಮೇಳ ಕ್ರೀಡೆಯ ಸಮಗ್ರ ಮಾಹಿತಿ ವಿದ್ಯಾರ್ಥಿಗಳಿಗೆ ಒಂದಡೆ ಸಿಗುವಂಥ ಕಾರ್ಯ ಶಹಾಪುರ ಮೇಳದಿಂದಲೇ ಆಗಿದೆ. ಮುಂದಿನ ದಿನಗಳಲ್ಲಿ ಮೇಳಕ್ಕೆ ಹಿರಿಯರ ಮಾರ್ಗದರ್ಶನದಿಂದ ಹೊಸ ಸ್ವರೂಪಕೊಟ್ಟು ಮೇಳದ ವೈಶಿಷ್ಟ್ಯತೆ ಹೆಚ್ಚಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಭಾಗಣ್ಣ ಕೂಡ್ಲೂರ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಬಾಲಕರ ಪ್ರೌಢಶಾಲೆ, ಪೇಠ ಶಹಾಪುರ, ಹಿ.ಪ್ರಾ.ಶಾಲೆಯ ಮಕ್ಕಳು ಉತ್ತಮವಾಗಿ ಯೋಗ ಪ್ರದರ್ಶಿಸಿ ಗಮನ ಸೆಳೆದರು. ವೇದಿಕೆ ಮೇಲೆ ಉಪಪ್ರಾಚಾರ್ಯ ನಿಂಗಣ್ಣ ಸಿಂಪಿ, ವಿಷಯ ಪರಿವೀಕ್ಷಕ ಎಸ್.ಕೆ. ಸೋನಾರ್, ಡಾ. ರಾಜಕುಮಾರ, ನಾಗರಾಜ ಕೂಡ್ಲೂರ, ಸಿ.ಬಿ. ಸಿಂದನೂರ, ಅಜೀಂ ಫ್ರೇಮಜಿ ಪೌಂಡೇಶನ್ ಮಂಜುಳಾ, ನಿಂಗಪ್ಪಕಂಚಿ ಮತ್ತು ಪ್ರಮುಖರಾದ ಸೋಮಶೇಖರಯ್ಯ ಹಿರೇಮಠ, ಬಿ.ಸಿ. ಪಾಟೀಲ, ಸಂಜೀವದರಬಾರಿ, ಶಿವಶರಣಪ್ಪ ಪಾಟೀಲ, ಮಲ್ಲಯ್ಯ ಯಾದಗಿರಿ, ಬಸವರಾಜ, ಮಹೇಶಜಾಗಿರದಾರ ಮತ್ತು ಸಮಸ್ತ ಶಹಾಪುರದ ದೈಹಿಕ ಶಿಕ್ಷಕರ ಬಳಗ ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಕ್ರೀಡಾಮೇಳದಲ್ಲಿ ವಿವಿಧ ಶಾಲೆ ವತಿಯಿಂದ ಸಮಗ್ರ ಮಾಹಿತಿ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಿತ್ರಾ ಶಾಲೆಯ ಮಕ್ಕಳು ನಾಡಗೀತೆಯನ್ನು ನೃತ್ಯದ ಮೂಲಕ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement