ಸುದ್ದಿ ಸಂಕ್ಷೇಪ
ಪ್ರತಿಭಟನಾ ದಿನಾಚರಣೆ ಇಂದು
ಗುಲ್ಬರ್ಗ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸರ್ಕಾರಿ ನೌಕರರ ವಿರೋಧಿ ನೀತಿಗಳನ್ನು ಪ್ರತಿಭಟಿಸಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕಕರ ಒಕ್ಕೂಟವು ಜನವರಿ 9ರಂದು ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಹಮ್ಮಿಕೊಂಡಿದೆ. ಪಿ.ಎಫ್.ಆರ್.ಡಿ.ಎ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು, ಕರ್ನಾಟಕ ಸರ್ಕಾರವು ನೌಕರರ ಮೇಲ ಜಾರಿ ಮಾಡಿದ ಏಸ್ಮಾ ಕಾಯಿದೆಯನ್ನು ಕೂಡಲೇ ಹಿಂಪಡೆಯಬೇಕು, ಸರ್ಕಾರಿ ಸೇವೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪದ್ದತಿ ಕೈಬಿಡಬೇಕು. ಗುತ್ತಿಗೆ ಆಧಾರ, ದಿನಗೂಲು, ತಾತ್ಕಾಲಿಕ ನೇಮಕ ಹೊಂದಿದ ಎಲ್ಲಾ ನೌಕರರಿಗೆ ಕಾಯಂ ವೇತನ ಶ್ರೇಣಿಗಳನ್ನು ನೀಡುವುದು. ಗುಲ್ಬರ್ಗ ನಗರವನ್ನು ಬಿ ಸಿಟಿಯೆಂದು ಪರಿಗಣಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕಕರ ಒಕ್ಕೂಟವು ಜನವರಿ 9 ರಂದು ಮಧ್ಯಾಹ್ನ 1.30 ಗಂೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಮಹಾವೀರ ಕಾಸರ ತಿಳಿಸಿದ್ದಾರೆ.
ಇಂದು ಗ್ರಾಹಕರ ದಿನ
ಗುಲ್ಬರ್ಗ: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಸ್ಥಳೀಯ ಗ್ರಾಹಕರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಐವಾನ್ ಇ-ಶಾಹಿ ಅತಿಥಿ ಗೃಹದಲ್ಲಿ ಜ.9ರಂದು ಸಂಜೆ 4ಕ್ಕೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಎಸ್.ಎಂ. ರೆಡ್ಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಜಿಪಂ ಸಿಇಒ ಟಿ.ಹೆಚ್.ಎಂ. ಕುಮಾರ ಆಗಮಿಸಿ, ನ್ಯಾಯವಾದಿ ಅಣ್ಣಾರಾವ ಅಮರೆ ಹಾಗೂ ಗೋಪೆಮ್ಮ ದೇಶಮುಖ ಗ್ರಾಹಕರ ಸಶಕ್ತಿಕರಣವೇ ಗ್ರಾಹಕರ ಹಕ್ಕುಗಳ ಸಾರ್ವತ್ರಿಕರಣ ಕರಿತು ಉಪನ್ಯಾಸ ನೀಡಲಿದ್ದಾರೆ.
ಅಭಿವೃದ್ಧಿಗಾಗಿ ಧರಣಿ
ಗುಲ್ಬರ್ಗ: ನಗರದ ಜಗತ್ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಉದ್ಯಾನವನ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಒತ್ತಾಯಿಸಿ ಬುಧವಾರ ಜೈ ಕನ್ನಡಿಗರ ರಕ್ಷಣಾ ವೇದಿಕೆ ಬಸವೇಶ್ವರ ಪುತ್ಥಳಿ ಎದುರು ಧರಣಿ ನಡೆಸಿತು. ಬಸವೇಶ್ವರ ಮೂರ್ತಿ ಆವರಣದಲ್ಲಿ ಉದ್ಯಾನಕ್ಕಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹಣ ಮೀಸಲಾಗಿಡಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಕೈಗೊಳ್ಳುತ್ತಿಲ್ಲ. ಕೂಡಲೇ ಬಸವೇಶ್ವರ ಮೂರ್ತಿ ಆವರಣದಲ್ಲಿ ಉದ್ಯಾನವನ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚೀನ್ ಫರತಾಬಾದ್ ಹೇಳಿದರು. ಧರಣಿಯಲ್ಲಿ ಅಣವೀರ ಪಾಟೀಲ್, ಕಾಶಿನಾಥ ಮಾಳಗೆ, ಸಂದೇಶ ಪವಾರ, ಸಂಜು ಗುತ್ತೇದಾರ, ಸತೀಶ ಭಾಗವಹಿಸಿದ್ದರು.