ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೆಮಿಸ್ಟರ್ ಪದ್ಧತಿ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

Mainashree
Updated On : 9 Jan 2014, 10:55 am

ಗುರುಮಠಕಲ್: ಸೆಮಿಸ್ಟರ್ ಪದ್ಧತಿಯನ್ನು ಕೈಬಿಡಲು ಆಗ್ರಹಿಸಿ ರಾಜ್ಯಾದ್ಯಂತ ತರಗತಿ ಬಹಿಷ್ಕಾರ ಚಳುವಳಿಯ ಅಂಗವಾಗಿ ಯಾದಗಿರಿಯ ವಿವಿಧ ಐಟಿಐ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಎಐಡಿವೈಒ ಮತ್ತು ಎಐಡಿಎಸ್‌ಒ ಯಾದಗಿರಿ ಸಮಿತಿಗಳ ನೇತೃತ್ವದಲ್ಲಿ ನಗರದ ಪದವಿ ಕಾಲೇಜಿನ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಮಾನ್ಯ ಜಿಲ್ಲಾಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಐಡಿಎಸ್‌ಒ ಯಾದಗಿರಿ ಸಮಿತಿಯ ಅಧ್ಯಕ್ಷ ಕಾ.ಗೌರಮ್ಮ ಮತ್ತು ಎಐಡಿವೈಒನ ಜಿಲ್ಲಾ ಕಾರ್ಯದರ್ಶಿ ಕಾ. ನಿಂಗಣ್ಣ ಜಂಬಗಿ ಮಾತನಾಡಿದರು.
ಚಳುವಳಿಗಳ ಸ್ವರೂಪ: ಐಟಿಐ ವಿದ್ಯಾರ್ಥಿಗಳ ಆತಂಕ ನಿವಾರಣೆಗಾಗಿ, ಸೆಮಿಸ್ಟರ್ ಪದ್ಧತಿಯನ್ನು ಕೈಬಿಡದಿದ್ದಲ್ಲಿ ರಾಜ್ಯಾದ್ಯಂತ ಇನ್ನಷ್ಟು ಉಗ್ರ ಪ್ರತಿಭಟನಾ ಪ್ರದರ್ಶನ, ಧರಣಿ, ಮಾನವ ಸರಪಳಿ, ಪ್ರತಿಭಟನಾ ಮೆರವಣಿಗೆ, ಅನಿರ್ದಿಷ್ಟಾವಧಿ ಚಳುವಳಿ ಹೀಗೆ ಹೋರಾಟದ ವಿವಿಧ ಸ್ವರೂಪಗಳ ಚಳುವಳಿ ನಡೆಸಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿ ವಿರೋಧಿ, ಅವೈಜ್ಞಾನಿಕ ಸೆಮಿಸ್ಟರ್ ಪದ್ಧತಿ ರದ್ದಾಗುವವರೆಗೂ ಹೋರಾಟ ನಡೆಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾ. ವಿಜಯ ಕುಮಾರ್, ಕಾ.ರಾಮು, ಕಾ. ಮರಿಲಿಂಗಪ್ಪ, ಕಾ. ಸೈದಪ್ಪ, ಮಹಾದೇವರೆಡ್ಡಿ, ವಿಜಯ ಭಾಸ್ಕರ್, ಎಂ. ಮಲ್ಲಿಕಾರ್ಜುನ, ಜುಬೇರ್, ಹೆಚ್. ಮಧು, ಹಣಮಂತ, ಕರಣಕುಮಾರ್, ರಂಗಪ್ಪ, ರವಿಚಂದ್ರ, ವಿಜಯಕುಮಾರ್, ಮಹಬೂಬ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement