ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ವಿದ್ಯುತ್ ವ್ಯತ್ಯಯ

Mainashree
Updated On : 10 Jan 2014, 11:23 am

ಗುಲ್ಬರ್ಗ: ಅಫಜಲ್ಪುರದ 76 ಕೆ.ವಿ. ಜೋಡಣೆ ಹೊಸ ಮಾರ್ಗದ ಸುಧಾರಣೆ ಕೆಲಸ ಜ.10 ರಿಂದ 12 ರವರೆಗೆ ಕೈಗೊಳ್ಳಲಾಗುವುದು. ಈ ಪ್ರಯುಕ್ತ ಆಯಾ ದಿನಗಳಂದು ಬೆಳಗಿನ 8 ರಿಂದ 6 ಗಂಟೆವರೆಗೆ ಅಫಜಲ್ಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 100 ಕೆ.ವಿ ಅಫಜಲ್ಪುರ ಉಪ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿನ ಎಫ್-6 ಹಳಿಯಾಳ, ಎಫ್-7 ಬಳ್ಳೂರರ್ಗಿ, ಎಫ್-1 ಮಲ್ಲಾಬಾದ ಫೀಡರ ಮತ್ತು 33 ಕೆ.ವಿ. ಚೌಡಾಪೂರ, ರೇವೂರ, ಗುಡೂರ ವಿದ್ಯುತ್ ಉಪವಿತರಣಾ ಕೇಂದ್ರಗಳ ಮೇಲೆ ಬರುವ ಹಳಿಯಾಳ, ಬಳ್ಳೂರಗಿ, ಮಲ್ಲಾಬಾದ, ಆನೂರ, ರೇವೂರ, ಕುಲಾಲಿ, ಬಡದಾಲ, ಚಿಂಚೋಳಿ, ಆತನೂರ, ಸಿದ್ಧನೂರ, ಅಂಕಲಗಾ ಹಾಗೂ ಗೂಡುರ ಸುತ್ತಮುತ್ತ ಬರುವ ಗುಡೂರ, ಬೈರಾಮಡಗಿ, ಸ್ಟೇಷನ್ ಗಾಣಗಾಪುರ, ನೀಲೂರ, ಮದರಾ(ಬಿ) ಮತ್ತು ಕೆ, ದಿಕ್ಸಂಗಾ, ಗೌಡಗಾಂವ, ಕಾರಬೋಸಗಾ, ಕೋಗನೂರ, ಗೊಬ್ಬೂರ(ಬಿ) ಸುತ್ತಮುತ್ತಲಿನ ಬರುವ ಹಳ್ಳಿಗಳಾದ ಗೊಬ್ಬುರವಾಡಿ, ವಡ್ಡಳ್ಳಿ, ಅವರಳ್ಳಿ, ಬಿದನೂರ, ಹಾವನೂರ, ಚೌಡಾಪುರ ಸುತ್ತಮುತ್ತಲಿನ ಬರುವ ಹಳ್ಳಿಗಳಾದ ಚೌಡಾಪುರ, ಬಾದನಳ್ಳಿ, ದಣ್ಣೂರ, ಇಂಗಳಗಿ, ಅವರಾದ, ಚಿಣಮಗೇರಾ, ಬಂದರವಾಡ, ದೇವಲಗಾಣಗಾಪೂರ, ಕೆರಕನಳ್ಳಿ, ತೆಲ್ಲೂರ. ಬಲ್ಲಾಡ(ಕೆ) (ಬಿ), ಬಟಗೇರಾ, ತೆಗ್ಗಳ್ಳಿ, ಹೂವಿನಹಳ್ಳಿ, ಹಸರಗುಂಡಗಿ, ಚಿನ್ನಮಳ್ಳಿ, ಕಿರಸಾವಳಗಿ, ಕೆಕ್ಕರಸಾವಳಗಿ, ಟಾಕಳಿ, ಉಮರಗಾ, ಸಿರಸಗಿ ಮತ್ತು ಸಾಗನೂರ ಗ್ರಾಮಗಳು ಹಾಗೂ ಇತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಪನೂರ ಉಪ ವಿತರಣಾ ಕೇಂದ್ರ: ನಗರದ 100 ಕೆ.ವಿ. ಕಪನೂರ ಉಪವಿತರಣಾ ಕೇಂದ್ರದಲ್ಲಿ ಸುಧಾರಣೆ ಕೆಲಸವನ್ನು ಜ.10 ರಂದು ಕೈಗೆತ್ತಿಕೊಳ್ಳುತ್ತಿರುವ ಪ್ರಯುಕ್ತ ಅಂದು ಬೆಳಿಗ್ಗೆ 10ರಿಂದ 4 ಗಂಟೆವರೆಗೆ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕೆಐಡಿಬಿ- 1ನೇ, ಕೆಐಡಿಬಿ 2ನೇ ಹಂತ, ಹರಸೂರ, ಅವರಾದ, ಬೇಲೂರ ಕೈಗಾರಿಕಾ ಪ್ರದೇಶ ಮತ್ತು ಅಶೋಕ ಪಾಲಿಮರ ಫೀಡರಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದ್ದುಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement