ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಎಸ್‌ಐ ಉದ್ದಂಡಪ್ಪ ಆರೋಗ್ಯ ಸ್ಥಿರ;ಪಿಎಸ್‌ಐ ಬಂಡೆ ಸ್ಥಿತಿ ಇನ್ನೂ ಗಂಭೀರ

Vishwanath S
Updated On : 10 Jan 2014, 12:39 pm

ಗುಲ್ಬರ್ಗ: ಸುಫಾರಿ ಹಂತಕ ಮುನ್ನಾ ಬಂಧನಕ್ಕೆ ತೆರಳಿದಾಗ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ಸ್ಟೇಷನ್ ಬಜಾರ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರನ್ನು ಇಲ್ಲಿನ ಬಸವೇಶ್ವರ ಆಸ್ಪತ್ರೆ ತುರ್ತು ನಿಗಾ ಘಟಕದಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಯೋಶದರಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಂಡೆ ಅವರಿಗೆ ನರರೋಗ ತಜ್ಞ ಡಾ. ಶಶಾಂಕ್ ರಾಮದುರ್ಗ ನೇತೃತ್ವದಲ್ಲಿ ಅಗತ್ಯ ತುರ್ತು ಚಿಕಿತ್ಸೆ ನೀಡಲಾಗಿತ್ತು. ಜೊತೆಗೆ ಮೆದುಳನ್ನು ಹೊಕ್ಕ ಎಲುಬಿನ ಚೂರುಗಳು, ಗುಂಡಿನಿಂದ ಉಂಟಾದ ಸೋಂಕು ಎಲ್ಲವನ್ನೂ ಸ್ವಚ್ಛಗೊಳಿಸಲಾಗಿತ್ತು. ಹೈದರಾಬಾದ್‌ಗೆ ಸ್ಥಳಾಂತರಿಸುವ ಚಿಂತನೆ ಇತ್ತಾದರೂ ಆರೋಗ್ಯ ಗಂಭೀರವಾಗಿದ್ದರಿಂದ ಅದು ಸುಲಭವಾಗಿರಲಿಲ್ಲ. ಅದರೆ, ಬಂಡೆ ಅವರ ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿದ್ದರಿಂದ ಹೈದರಾಬಾದ್‌ನ ಯಶೋದರಾ ಆಸ್ಪತ್ರೆಗೆ ಕಳುಹಿಸಿದ್ದು, ಸುರಕ್ಷಿತವಾಗಿ ತಲುಪಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಇನ್ನೂ ಕೋಮಾವಸ್ಥೆಯಲ್ಲಿಯೇ ಇದ್ದಾರೆ ಎಂದು ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement