ಸುದ್ದಿ ಸಂಕ್ಷೇಪ
13ರಂದು ಪೂರ್ವಭಾವಿ ಸಭೆ
ಸುರಪುರ: ಇಲ್ಲಿಯ ಮಿನಿ ವಿಧಾನಸೌಧದ ಸಭಾಂಗಣದಲ್ಲಿ 13ರಂದು ಮಧ್ಯಾಹ್ನ 3ಕ್ಕೆ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.
ಕ್ಲೆಮಾಡಲಿಂಗ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಶಹಾಪುರ: ತಾಲೂಕಿನ ಹೊಸಕೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಿವರಾಜ ಮಲ್ಲಣ್ಣ ಜಿಲ್ಲಾ ಪಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಣ್ಣಿನಿಂದ ಮೊಸಳೆ ಆಕೃತಿ ರಚನೆ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಪ್ರೌಢಶಾಲೆಯ ಮುಖ್ಯಗುರು, ಎಸ್‌ಡಿಎಂಸಿಯವರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಕಾರಂಜಿಯಲ್ಲಿ ಸಾಧನೆ
ಶಹಾಪುರ: ತಾಲೂಕಿನ ಗೋಗಿ ಪೇಠ ಗ್ರಾಮದ ಸರ್ಕಾರಿ ಕನ್ಯಾ ಶಾಲೆಯ ವಿದ್ಯಾಥಿನಿಯರು ಸತತ 6 ವರ್ಷಗಳಿಂದ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳುತ್ತಿದ್ದಾರೆ. ಜ.6ರಂದು ಯಾದಗಿರಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನಡೆದ ಸಂದರ್ಭದಲ್ಲಿ ಜನಪದ ನೃತ್ಯ , ಕೋಲಾಟ, ವೈಯಕ್ತಿಕ ಸ್ಪರ್ಧೆಗಳಾದ ಸಂಸ್ಕೃತ, ತಮಿಳು, ಮರಾಠಿ, ತೆಲಗು ಭಾಷೆಯ ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರತಿಭಾ ಕಾರಂಜಿ: ರಾಜ್ಯಮಟ್ಟಕ್ಕೆ ಆಯ್ಕೆ
ಸುರಪುರ: ಇಲ್ಲಿಯ ರಾಣಿ ಜಾನಕಿದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ರತ್ನಾ ಈರಣ್ಣ ಯಾದಗಿರಿಯಲ್ಲಿ ಜರುಗಿದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಚರ್ಚೆ ಮತ್ತು ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಶಾಲಾ ಗುರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ನಾಳೆ ವಾರ್ಷಿಕೋತ್ಸವ
ಶಹಾಪುರ: ಹೋತಪೇಟ ಸಮೀಪವಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಬರುವ 11 ಶನಿವಾರದಂದು 27ನೇ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಬೀ.ಗುಡಿ ಕೃಷಿ ಕಾಲೇಜಿನ ಡೀನ್ ಆರ್.ಎಸ್. ಗಿರೆಡ್ಡಿ ಉಪಸ್ಥಿತರಿರಲಿದ್ದು, ವಿದ್ಯಾಲಯದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯ್ದ ಕವನ ಸಂಕಲನಗಳ ಬಿಡುಗಡೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ. ಅಧ್ಯಕ್ಷತೆಯನ್ನು ವಿದ್ಯಾಲಯದ ಪ್ರಾಚಾರ್ಯರಾದ ರಾಯ್.ಪಿ.ಜಾನ್ ವಹಿಸಲಿದ್ದಾರೆ. ಸರ್ವರು ಭಾಗವಹಿಸಲು ಸಮಸ್ತ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.